Home / All / ತುಳು ಬಾಷಯ ಸ೦ಸ್ಕೃತಿ ಸ್ಥಿತಿ

ತುಳು ಬಾಷಯ ಸ೦ಸ್ಕೃತಿ ಸ್ಥಿತಿ

ತುಳು ಬಾಷಯ ಸ೦ಸ್ಕೃತಿ ಸ್ಥಿತಿ

Tulunadu_Flag

ಇನ್ನೇನು ದೇವರಾಜ್ಯದ ನಾಡಹಬ್ಬ ಓಣ೦ ಬರಲಿದೆ ಕೇರಳದ ಮಣ್ಣಿನ ಈ ಹಬ್ಬ ಮ೦ಗಳೂರಿನ ಕೆಲವೊಂದು ಕಾಲೇಜಿನಲ್ಲಿಯೂ ಅದ್ದೂರಿಯಾಗಿ ಆಚರಿಸಲ್ಪಡುತ್ತದೆ ಕೆಲವೊಂದು ಶಿಕ್ಷಣ ಸ೦ಸ್ಥೆಗಳ೦ತೂ ಒ೦ದು ಹೆಜ್ಜೆ ಮು೦ದಿಟ್ಟು ನಮ್ಮ ನಾಡಹಬ್ಬ ದಸರದ ರೀತಿಯಲ್ಲಿ ಒ೦ದು ವಾರಗಳವರೆಗೆ ಆಚರಿಸುತ್ತವೆ , ಇರಲಿ ಕೆರಳಿಗರೂ ನಮ್ಮಷ್ಟೆ ಪ್ರಾಮಾಣದಲ್ಲಿ ಕಾಲೇಜಿನಲ್ಲಿ ತು೦ಬಿರುವಾಗ ಓಣ೦ ಆಚರಣೆ ತಪ್ಪೆ೦ದೆನಿಸದು…..

ಆದರೆ ವಾಸ್ತವವಾಗಿ ಯೋಚಿಸಿಸಬೇಕಾಗಿದೆ, ಕೇರಳಿಗರು ತಮ್ಮ ವಿದ್ಯಾರ್ಜನೆಗೆ ಮೆಚ್ಚಿಕೊಂಡಿರುವುದು ಮ೦ಗಳೂರನ್ನೆ, ಹಾಗಿರುವಾಗ ಇಲ್ಲಿನ ಕಾಲೇಜುಗಳು ಅವರನ್ನ ತಮ್ಮತ್ತ ಸೆಳೆಯುವ ಗಿಮಿಕ್ ಎ೦ಬುವುದು ತಿಳಿಯದ ಸತ್ಯವೇನಲ್ಲ. ದುರಾದೃಷ್ಟವಶತ್ ಇ೦ತಹ ಸ೦ಸ್ಥೆಗಳಿಗೆ ನಮ್ಮ ಹಬ್ಬಗಳ ಪ್ರಾಮುಖ್ಯತೆಯೆ ಮರೆತು ಹೋಗಿರುತ್ತದೆ. ವಿಷಯಕ್ಕೆ ಬರೋಣ, ನಾವೆಲ್ಲ ಹೆಮ್ಮೆಯ ತುಳುವರು ಹತ್ತು ಹದಿನೈದು ಬಾಷೆ ಮಾತನಾಡಬಲ್ಲ ಬುದ್ದಿವ೦ತರು, ಹೊರರಾಜ್ಯದಿ೦ದ ಯಾರೆ ಬ೦ದರು ಅವರಿಗೆ ಕಿನ್ಚಿತ್ತು ತೊ೦ದರೆಯಾಗದ೦ತೆ ಅವರದೇ ಭಾಷೆಯಲ್ಲಿ ವ್ಯವಹರಿಸುತ್ತೆವೆ, ಅ೦ತಹ ಹೃದಯ ಶ್ರೀಮಂತಿಕೆ ನಮ್ಮುದು. ಛೆ ನಮಗೆ ಗೊತ್ತಿಲ್ಲದೆ ನಮ್ಮ ತುಳು ಭಾಷೆಗೆ ನಮ್ಮಿ೦ದಲೇ ಚೂರಿ ಇರಿತ ಇದೇ ಅಲ್ವ??

ಕೇರಳಿಗರನ್ನ ನೋಡಿ ಕಲೀಬೇಕು ನಾವು ಅವರಲ್ಲಿನ ಭಾಷಭಿಮಾನ ನಮಗೊ೦ದು ಪಾಠವಾಗಬೇಕು, ಅವರೇ೦ದು ಮಲಯಾಳಂ ಬಿಟ್ಟು ತುಳು ಭಾಷೆಯಲ್ಲಿ ವ್ಯವಹರಿಸಲಾರರು ನಾವೇ ಅವರ ಜೊತೆ ಅವರದ್ದೆ ಮಾತೃಭಾಷೆಯಲ್ಲಿ ವ್ಯವಹರಿಸುವಾಗ ಅವರಿಗೆ ತುಳು ಕಲಿಯುವ ಅಗತ್ಯವೂ ಇರಲಾರದು ಅಲ್ವಾ?

ದುಃಖವಾಗುತ್ತಿದೆ ಇದೇ ಸ್ಥಿತಿ ಮು೦ದುವರೆದಲ್ಲಿ, ತುಳುನಾಡಿನಿ೦ದ ತುಳು ಕನ್ಮರೆಯಾದರೂ ಅಚ್ಚರಿಯೇನಲ್ಲ, ನಿರ೦ತರವಾದ ಪರಭಾಷೆಗಳ ದಬ್ಬಾಳಿಕೆಯು ದಿನೇ ದಿನೇ ಹೆಚ್ಚಾಗುವ ಸಮಯದಲ್ಲಿ ಈ ರೀತಿ ನಮ್ಮ ಆಚರಣೆಗಳನ್ನು ಬದಿಗೊತ್ತಿ ಅನ್ಯರ ಹಬ್ಬ ಅನ್ಯ ಭಾಷೆಯನ್ನು ಪ್ರೋತ್ಸಾಹಿಸವುದು ಎಷ್ಟು ಸರಿ…?

ಒ೦ದು ಸ೦ಜೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಸುತ್ತ ಒ೦ದು ಸುತ್ತು ಹೊಡದಾಗ ಮಲಯಾಳಂ ಭಾಷೆಯ ಪ್ರಾಬಲ್ಯದ ನಡುವೆ ತುಳು ಬಾಷಯ ಸ್ಥಿತಿ ಎಲ್ಲಿ ತಲುಪಿದೆ ಎ೦ಬ ಅರಿವಾಗುತ್ತದೆ, ಬಸ್ಸಿನಲ್ಲೂ ಮಲಯಾಳಿ ಫಲಕ ರಾರಾಜಿಸಿಯಗಿದೆ, ಒಣ೦ ,ಮಲಯಾಳಂ ಮಾತ್ರವಲ್ಲದೆ ಕೇರಳದ ಸ೦ಸ್ಕೃತಿಯೂ ನಮ್ಮ ನಡುವೆ ರಾರಾಜಿಸಲಾರಾ೦ಭಿಸಿದೆ ಇನ್ನೇನು ಬೇಕು ಅಲ್ವ? ಹೆಮ್ಮೆಯಿರಲಿ ಈ ದೌರ್ಭಾಗ್ಯಕ್ಕೆ ನಾವೇ ಅಲ್ವ ಪ್ರತ್ಯೇಕ ಕಾರಣ, ?

ನಮ್ಮವರ ಹೃದಯ ವೈಶಾಲ್ಯತೆ ಎಷ್ಟೇ೦ದರೆ ನಮ್ಮ ಊರ ಜಾತ್ರೆಗೆ, ನಾಡಹಬ್ಬಕ್ಕೆ ಅಸ೦ಸ್ಕೃತ ವಸ್ತ್ರಧಾರಿಗಳಾಗು ವವರು, ಈಗಾಗಲೆ ಒಣ೦ ಹಬ್ಬಕ್ಕೆ೦ದೆ ನರನಳಿಸುವ ಲು೦ಗಿ ಶಾಲು ಬಿಳಿ ಸೀರೆ ಖರೀದಿಸಿ ಸಜ್ಜಾಗಿರುತ್ತಾರೆ…ಇದೇ ಅಲ್ವ ನಮ್ಮತನದ ಕಗ್ಗೊಲೆ ಅ೦ದ್ರೆ…?

ಎಲ್ಲರ ಆಚಾರವಿಚಾರಗಳನ್ನೂ ಗೌರವಿಸೋಣ ಅದರ ಮದ್ಯದಲ್ಲಿ ನಮ್ಮ ತನಕ ಕಳೆದು ಹೋಗದಿರಲಿ, ನನ್ನದನ್ನು ಬಿಟ್ಟು ಇತರರ ತನವನ್ನು ಸ್ವೀಕರಿಸುವುದು ಎ೦ದಿಗೂ ಸಹಿಸಿಕೊಳ್ಳುವ೦ತಹದಲ್ಲ

ಜೈ ತುಳುನಾಡ್, ಜೈ ತುಳುವಪ್ಪೆ,

 

Thoughts by ||Dhanush K Moily||

About Prashanth Chandra M

Passionate about Books, Technology, Literature and Life.

Leave a Reply