Home / All / Shree Sooryanarayana Temple -Maroli Mangalore

Shree Sooryanarayana Temple -Maroli Mangalore

ABOUT TEMPLE

6

4

 

About 1200 yrs ago severe penance was performed by the ascetics as a result this Shree Sooryanarayana Kshethra came into existence. But 450 years ago due to lack of support from the Kings the temple was in ruins. During those days a Jain female chief of this village cluster possessed the presidency comprising of seven villages namely Maroli, Padau, Alape, Bajal, Kannoor, Jappu and Kankanady responded to the miseries of the inhabitants. On behalf of these afflicted devotees she accepted Shree Sooryanarayana as the clan God [Kuladevatha] of the village cluster of these seven villages. It was the responsibility of the people of these seven villages to rectify the defects.
Once again after a very long time the temple reached the pathetic condition as per the legend of this place. It is the joint venture of the people of Maroli, Kannoor, Alape, Padavu, Bajal and Kankanady and the devotees of the outskirts to eradicate all the short comings. It is an unique opportunity.
Shree Sooryanarayana Temple possesses Saanidhya of Hari, Hara, Brahma and Shakthi and it is unique and sacred Kshethra. There are so many evidences to show the miraculous uplift of the devotee. Therefore, it is our bound and duty to revive this sacred temple and provide amenities, to the devotees visiting this Kshethra.
As per the record, this Kshethra is an ancient temple of South India and designed on the lines of the old temple of Bhargava Kshethra. It is our aim and objective to rejuvenate Sculpture (Vastu Shilpa).

Regional Temple
Right from the time unknown Shree Sooryanarayana Kshethra was the base for many divine powers. It is known that hundreds of sages and ascetics performed penance.
About one thousand two hundred years ago, sages had visualised a ‘globe of light’ and they laid foundation for a temple. In the beginning it was worshiped as Parabrahma. Some worshipers of Shiva (Shaivas) for the convenience of worship, worshiped this divine power as the base of Shiva- Shakthi. This Shiva Shakthi is the visual and concrete form of unvisualised form of Parabrahma. With this fundamental faith the worship of Parashiva and Parashakthi was being performed. The idol of Maha Ganapathi was established. Afterwards the vaishnavas took charge of this temple and to suit the customs of their worship they worshiped this Parabrahmashakthi as Shreemannarayana. They believed that Parashakthi and Parashiva were the form of Parabrahma and they worshiped the idol of Shiva. They offered Rudraabhisheka to Shiva and to maintain the existence of Parashakthi they preserved the customs of celebrating Navarathri.

In those days the temple was popular. Devotees from near and far off places got their wishes fulfilled. But due to the lack of royal support the temple deteriorated. On account of this the people residing around this temple became the victims of many disasters. But in the sixteenth century the Jaina Queen with the guidance of sages, who had visualised the globe of light, re-established the temple. In that way they preserved the customs of Shaiva and Shaaktha. They believed Shree Vaidyanaath as main deity. They maintained Shree Raktheshwari and Mahisandaya as the guardians of Sree Vaidyanath. The queen established Naagabana and inaugurated Naagaaradhana. The people and the Queen gave enough land free of cost for the management and development of the temple. Due to the irresponsibility of the Management Committee the temple was deprived of its land and financial source. The timely developmental work also was hindered.

Elderly people say that once upon this Kshethra was a very prosperous & rich temple. During the Annual festival the ornaments were lent to the neighbouring temples. Since this was the only regional (Seeme) temple of Mangalore, the people belonging to suburban Daivasthana and Devasthana offeres “Kanika” first here here and next began their work.

The Shree Sooryanarayana temple is possessing the saanidhya of Hari, Hara, Brahma and Shakthi. It is unique and sacred Kshethra. There are many evidences to show that the devotees who had faith have achieved their wishes fruitfully. Therefore it is the bound and duty of us to revive this Kshethra by providing amenities and facilities to the pilgrims.

The queen established Naagabana and inaugurated Naagaaradhana. The people and the Queen gave enough land free of cost for the management and development of the temple. Due to the irresponsibility of the Management Committee the temple was deprived of its land and financial source. The timely developmental work also was hindered.
Elderly people say that once upon this Kshethra was a very prosperous & rich temple. During the Annual festival the ornaments were lent to the neighbouring temples. Since this was the only regional (Seeme) temple of Mangalore, the people belonging to suburban Daivasthana and Devasthana offeres “Kanika” first here here and next began their work.
The Shree Sooryanarayana temple is possessing the saanidhya of Hari, Hara, Brahma and Shakthi. It is unique and sacred Kshethra. There are many evidences to show that the devotees who had faith have achieved their wishes fruitfully. Therefore it is the bound and duty of us to revive this Kshethra by providing amenities and facilities to the pilgrims.

The worship of the Sun god is very ancient. In Ramayana Rama could kill Ravana with the help of Soorya Mantra ‘Adithya Hridaya’. Lord Shree Krishna used to offer ‘Arghya’ daily in the early morning to God Son. This was the cause of Gaya’s episode. This shows that the worship of the Sun God is very ancient. To control the mind and expand it, chanting of the Gayathri mantra of the Sun God is very essential.
It has come to light that in Sourastra the worship of the Sun was in vogue. In those days the people of Sourastra did not have faith in other dieties except in the Sun. According to the Ayurvedic Doctors Charaka and Shurutha, the sun had predominant part. In Ayurveda Bhoor, Bhuvara, Swaha – are the deities of 3 worlds. Soorya namaskara is based on Gayathri Manthra. Shree Shankaracharya wanted to unify all the cults of devotees. So he started the adoration of the Sun. Along with Shree Shiva, Shree Vishnu, Shree Devi and Shree Ganapathi, the Sun was the fifth god. As per Astrology Sun is the king of Navagraha.

The Divine Power Of The Kshethra
There are so many evidences to show that many devotees prayed with utmost devotion. Consequently their desires were fulfilled. Childless couples who pray to God in the early morning will be blessed with a child within a year. Severe ailments such as head ache, stomach ache, are cured by offering tender coconut Abhisheka. To prove this there are many popular evidences. Many devotees from suburban villages, nearby and far away places come and pray for their marriages. Their marriages were fixed within a year. All the prayers were fruitful due to the gracious power. On the whole the blessing power of the Lord is vast and unique.

The Annual Festivals Being Celebrated At Shree Kshethra
Maharathotsava – Maagha Saptami
Annual festival of foundation – Feb 1.
Arka Pooja – April
Public offering of tender coconut – May
Nagara Panchami – Sravana Shukla Panchami
Ganesha chathurthi – Bhadrapad Shukla chathurthi
Sonarathi – Kanya Sankramana
Navarathri – Ashwija month Padya to Navami
Tulasi Pooja – Karthik Shukla Dwadashi
Bali Padyami – Margashira shukla prathi pada

Timings of Pooja
Morning – 6 a.m.
Afternoon – 12 noon
Night – 8 p.m.

 

ABOUT THE TEMPLE

ಶ್ರೀ ಸೂರ್ಯನಾರಾಯಣ ದೇವಸ್ಥಾನ ಉದ್ಘೋಷಣಾ ವಿವರ
ಮರೋಳಿ ಸೂರ್ಯನಾರಾಯಣ ದೇವಸ್ಛಾನಕ್ಕೆ ಒಂದು ವಿಶೇಷ ಐತಿಹ್ಯ ಇದೆ. ಆದಿಯಲ್ಲಿ ಇದು ಒಂದು ಗುಹೆ, ಅರಣ್ಯ, ಜಲಚರಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶ. ಆ ಸಮಯದಲ್ಲಿ ಮಹಾ ತಪಸ್ವಿ ಋಷಿಯೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂದು ಪ್ರತೀತಿ. ಸಂಸ್ಕ್ರತದಲ್ಲಿ “ಮರಾಲಿ” ಎಂದರೆ ಸಾತ್ವಿಕ-ಸುಂದರ ಎಂದು ಅರ್ಥ. ಮರಾಲ ಋಷಿಯ ಕತೆಯು ಇದೆ.
ಹಿಂದಿನ ಕನ್ನಡ ಲಿಪಿಯಲ್ಲಿ ಈ ಪ್ರದೇಶವನ್ನು ಮರೋಲಿ ಎಂದು ಬರೆದದ್ದಕ್ಕೆ ಆಧಾರ ಇದೆ. ಮರಾಲಿ, ಮರೋಲಿಯಾಗಿ ಈಗ ಮರೋಳಿಯಾಗಿ ಲಿಪಿಯಾಂತರ ಆಗಿರಬಹುದು.

ಸುಮಾರು ೧೨೦೦ ವರ್ಷಗಳ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿತ್ತು ಎನ್ನಲಾದ ಶ್ರೀ ಸೂರ್ಯನಾರಾಯಣ ಕ್ಷೇತ್ರವು ಕ್ರಿಶ.೧೬ನೇ ಶತಮಾನದಲ್ಲಿ ಯುದ್ಧ ಮತ್ತು ರಾಜಾಶ್ರಯದ ಕೊರತೆಯಿಂದಾಗಿ ಜೀರ್ಣಾವಸ್ಥೆಯನ್ನು ತಲುಪಿತ್ತು. ಕಾಲಾಂತರದಲ್ಲಿ ಇಲ್ಲಿ ಯಾವುದೋ ರಾಜರುಗಳ ನಡುವೆ ಯುದ್ಧವಾಗಿ ಈ ದೇವಸ್ಥಾನ ನಿರ್ನಾಮವಾಯಿತು. ಮುಂದೆ ಒಂದು ದಿನ ದೇವಸ್ಥಾನವೇ ಇಲ್ಲದ ಈಗಿನ ಶೂನ್ಯವಾಗಿದ್ದ ಸ್ಥಳದಲ್ಲಿ ಎರಡು ಗುತ್ತು ಮನೆಯ ಮಾತೆಯವರು ಈ ಸ್ಥಳದಲ್ಲಿ ಹಾಯ್ದು ಹೋಗುವ ಸಂದರ್ಭ ಕತ್ತಲಾಯಿತು. ಆಗ ಗೋಲರೂಪದಲ್ಲಿ ಪ್ರಭೆಯೊಂದು ಮಾತೆಯರಿಗೆ ಕಂಡು ದಿಗ್ಭಮೆಗೊಂಡು, ವಿಷಯ ತಿಳಿದ ರಾಣಿಯು ಅಲ್ಲೇ ದೇವಸ್ಥಾನ ಪುನಃ ನಿರ್ಮಾಣ ಮಾಡುವ ಸಂಕಲ್ಪ ಮಾಡಿದಳು. ಇದಕ್ಕೆ ಸಂವಾದಿಯಾಗಿ ಜೈನರಾಣಿಯೊಬ್ಬಳು ಈಗ ಇರುವ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿದಳು ಎಂಬುದು ಇತಿಹಾಸ. ಆ ದಿನಗಳಲ್ಲಿ ಮರೋಳಿ, ಕಣ್ಣೂರು , ಜಪ್ಪು, ಅಳಪೆ, ಪದವು, ಬಜಾಲ್ ಮತ್ತು ಕಂಕನಾಡಿ ಇತ್ಯಾದಿ ಏಳು ಮಾಗಣೆಗಳನ್ನು ಹೊಂದಿದ್ದ ಸಂಸ್ಥಾನವೊಂದನ್ನು ಆಳುತ್ತಿದ್ದ ಬಜಾಲ್ ನ ಜೈನ ವಂಶದ ಪಾಳೆಯಗಾರ್ತಿ ಒಬ್ಬಾಕೆ ತನ್ನ ಸಂಸ್ಥಾನದ ಜನರ ತೊಂದರೆಗಳು ನೀಗಬೇಕಾದಲ್ಲಿ ಮಂಗಳೂರಿನ ಏಕೈಕ ಸೀಮೆ ದೇವಸ್ಛಾನ ಮರೋಳಿಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯಲೇಬೇಕೆಂದು ಬಲ್ಲವರಿಂದ ಮನಗಂಡು ದೇವಾಲಯವನ್ನು ದುರಸ್ಥಿಗೊಳಿಸಿದಳು. ಹಾಗೇ ತನ್ನ ಸಂಸ್ಥಾನಕ್ಕೆ ಸೇರಿದ ಏಳೂ ಗ್ರಾಮದ ಜನರಿಗೆ ದೇವಸ್ಛಾನದ ಕೆಲಸದಲ್ಲಿ ಕೈಗೂಡಿಸುವಂತೆ ಆಣತಿ ಇತ್ತು ಸುಂದರ ದೇವಸ್ಛಾನವನ್ನು ಕಟ್ಟಿದಳು ಎಂದು ತಿಳಿದುಬರುತ್ತದೆ. ಈ ಜೈನ ರಾಣಿಯರ ಬಗ್ಗೆ ಕಣ್ಣೂರು ಗ್ರಾಮದ ವೈದ್ಯನಾಧ ದೈವದ ಪಾಡ್ದನದಲ್ಲಿ ಉಲ್ಲೇಖವಿದೆ. ಅಂದಿನಿಂದ ಈ ದೇವಾಲಯದ ಕುಂದು ಕೊರತೆಗಳನ್ನು ನೀಗಿಸಿಕೊಡು ಬರುವುದು ಅಂದಿನ ಬಜಾಲ್ ಸಂಸ್ಥಾನಕ್ಕೆ ಸೇರಿದ ಏಳೂ ಗ್ರಾಮಗಳ ಸಮಸ್ತ ನಾಗರಿಕರ ಜವಾಬ್ದಾರಿಯಾಯಿತು ಎಂಬ ಸ್ಥಳ ಐತಿಹ್ಯವಿದೆ.

ಇಂತಹ ಸ್ಥಳ ಪವಿತ್ರ ಎಂದು ರಾಣಿ ತಿಳಿದು ಪುನಃ ದೇವಸ್ಥಾನವನ್ನು ಕಟ್ಟುವಾಗ ಶ್ರೀ ಸೂರ್ಯನಾರಾಯಣ ಮತ್ತು ಶ್ರೀ ಮಹಾಗಣಪತಿ ಎರಡು ವಿಗ್ರಹಗಳನ್ನು ಮಾತ್ರ ಪ್ರತಿಷ್ಟಾಪಿಸಲಾಯಿತು. ದೇವಿಯ ವಿಗ್ರಹ ಬಹುಶಃ ರಾಣಿಯು ಅವಳ ಭವನದಲ್ಲಿ ಪೂಜಿಸುತ್ತಿದ್ದಳು, ಆ ನಂತರ ಆ ವಿಗ್ರಹ ಯಾವುದೋ ಕಾರಣದಿಂದ ನದಿಯಾಳದಲ್ಲಿ ಕಾಲಗರ್ಭಕ್ಕೆ ಸೇರಿತು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ವಿಚಾರ. ದೇವಾಲಯದ ಆಡಳಿತ ಮತ್ತು ಅಭಿವೃದ್ಧಿಗೆಂದು ಆಕೆ ಸಾಕಷ್ಟು ಆಸ್ತಿಪಾಸ್ತಿಯನ್ನು ಉಂಬಲಿಯಾಗಿತ್ತರೂ ಮುಂದಿನ ಕೆಲ ಶತಮಾನಗಳ ಬಳಿಕ ದೇವಾಲಯದ ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತ ಕೆಲವರ ಮುಂದಾಲೋಚನೆಯ ಕೊರತೆಯಿಂದಾಗಿ ದೇವಾಲಯವು ಹೊಂದಿದ್ದ ಭೂಮಿ ಮತ್ತು ಸಂಪತ್ತು ದೇವಾಲಯದ ಕೈ ತಪ್ಪಿ ಹೋಯಿತು. ಹಾಗಾಗಿ ಸಕಾಲದಲ್ಲಿ ಆಗಬೇಕಿದ್ದ ಅಭಿವೃದ್ಧಿ ಕಾರ್ಯಕ್ರಮದಿಂದಲೂ ದೇವಾಲಯ ವಂಚಿತವಾಯಿತು.
ಒಂದು ಕಾಲದಲ್ಲಿ ಈ ಕ್ಷೇತ್ರವು ತುಂಬ ಶ್ರೀಮಂತ ದೇವಸ್ಥಾನವಾಗಿತ್ತೆಂದು, ಇಲ್ಲಿಂದಲೇ ಕದ್ರಿ ಮುಂತಾದ ಕ್ಷೇತ್ರಗಳಿಗೆ ಜಾತ್ರಾಸಮಯದಲ್ಲಿ ಆಭರಣಾದಿಗಳು ಹೋಗುತ್ತಿದ್ದವು ಎಂದು ಹಿರಿಯರು ತಿಳಿಸುತ್ತಾರೆ. ಹಾಗೇಯೆ ನಮ್ಮಮಂಗಳೂರಿಗೆ ಇದೊಂದೆ ಸೀಮೆ ದೇವಸ್ಛಾನ ಆದ ಕಾರಣ ಶ್ರೀ ಮಂಗಳಾದೇವಿ ದೇವಸ್ಛಾನ ದವರು ಕೂಡಾ ಇಲ್ಲಿಪ್ರಾರ್ಢನೆ ಮಾಡಿ ದೊಡ್ಡ ದೊಡ್ಡ ಕೆಲಸಗಳನ್ನು ಪ್ರಾರಂಭಿಸುತ್ತಿದ್ದರು ಎಂದು ಬಲ್ಲವರಿಂದ ತಿಳಿದುಬರುತ್ತದೆ.

ಹರಿ, ಹರ, ಬ್ರಹ್ಮ ಹಾಗೂ ಶಕ್ತಿ ಸಾನಿಧ್ಯವನ್ನು ಹೊಂದಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯವು ನಮ್ಮ ಜಿಲ್ಲೆಯಲ್ಲಿ ಅತಿ ವಿಶಿಷ್ಟ ಹಾಗೂ ಪವಿತ್ರ ಕ್ಷೇತ್ರವಾಗಿದ್ದು ಈ ದೇವಾಲಯದ ಶಕ್ತಿಯನ್ನು ನಂಬಿ ಬಂದ ಭಕ್ತರಿಗೆ ಈ ಕ್ಷೇತ್ರದ ದೇವರು ಪವಾಡಸದೃಶ ಉನ್ನತಿಯನ್ನು ದಯಪಾಲಿಸಿದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಈ ಕಾರಣಿಕ ಕ್ಷೇತ್ರದಲ್ಲಿ ಭಕ್ತರ ಸೇವೆಗೆ ಬೇಕಾದ ಕೆಲವೊಂದು ಅನುಕೂಲತೆಗಳನ್ನು ಒದಗಿಸಿ ದೇವಾಲಯಕ್ಕೆ ಹೊಸ ಕಾಯಕಲ್ಪವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ದಾಖಲೆಯ ಪ್ರಕಾರ ಇದು ದಕ್ಷಿಣ ಭಾರತದ ಅತ್ಯಂತ ಪುರಾತನ ಶ್ರೀ ಸೂರ್ಯನಾರಾಯಣ ಕ್ಷೇತ್ರವಾಗಿದೆ. ನೂತನ ದೇವಾಲಯದ ವಿನ್ಯಾಸವನ್ನು ಭಾರ್ಗವ ಕ್ಷೇತ್ರದ ಪುರಾತನ ದೇವಾಲಯದ ವಾಸ್ತು ವಿನ್ಯಾಸದ ರೀತಿಯಲ್ಲಿ ರಚಿಸಿ ತುಳುನಾಡಿನ ಪುರಾತನ ವಾಸ್ತುಶೈಲಿಗೆ ನೀಡುವ ಉದ್ಧೇಶ ನಮ್ಮದು.
ಸೂರ್ಯ ಮಂಡಲದ ಪ್ರಧಾನ ದೇವರು ಶ್ರೀ ಸವಿತೃ ಸೂರ್ಯನಾರಾಯಣ. ನಮಗೆ ನಿತ್ಯ ಕಾಣುವ ದೇವರು. ಏಳು ಕುದುರೆಗಳ ರಥವನ್ನು ಏರಿ ಅರುಣನನ್ನು ಸಾರಥಿಯಾಗಿಟ್ಟುಕೊಂಡು ನಿತ್ಯ ಸಂಚಾರಿ ಎಂದು ಪ್ರತೀತಿ. ಸೌರಮಾನ ಪಂಥದವರಿಗೆ ಇವನು ಮೂಲ ಆಕಾರ, ಇವನು ಕಳಿಂಗ ದೇಶೋದ್ಭವ. ಹುಟ್ಟಿದ ದಿನ ಪ್ರಭಾವ ನಾಮ ಸಂವತ್ಸರ ಮಾಘಮಾಸ ಶುಕ್ಲ ಪಕ್ಷ ಸಪ್ತಮಿ. ಅದುವೇ ನಾವು ಆಚರಿಸುವ ರಥಸಪ್ತಮಿಯ ಮಹಾರಥೋತ್ಸವ.
ಭಾರತ ದೇಶದಲ್ಲಿ ಸೂರ್ಯನ ಆರಾಧನೆ ಸನಾತನವಾದದ್ದು. ರಾಮಾಯಣದಲ್ಲಿ ರಾವಣವಧಾ ಪ್ರಸಂಗದಲ್ಲಿ ಶ್ರೀ ಸೂರ್ಯಮಂತ್ರ ಆದಿತ್ಯಹೃದಯದ ಪ್ರಭಾವ, ಮುಂದೆ ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಸೂರ್ಯದೇವರಿಗೆ ಕೊಡುತ್ತಿದ್ದ ಪ್ರಾತಃ ಅರ್ಘ್ರ್ಯವೇ ಗಯನ ಪ್ರಕರಣಕ್ಕೆ ಕಾರಣ ಎನ್ನುವುದರಿಂದ ಶ್ರೀ ಸೂರ್ಯನ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬುದು ಜನಜನಿತ. ಋಷಿ ಮುನಿಗಳು ಅವರ ನಿತ್ಯಾನುಷ್ಠಾನದಲ್ಲಿ ಪ್ರಾತಃ ಸಂಧ್ಯೆಯನ್ನು ಶ್ರೀ ಸೂರ್ಯದೇವರಿಗೆ ಅರ್ಘ್ರ್ಯ ಕೊಟ್ಟು ಪ್ರಾರಂಭಿಸಿ, ಮನಸ್ಸಿನ ಹತೋಟಿಗೆ ಹಾಗೂ ಬುದ್ಧಿಯ ವಿಕಾಸವನ್ನು ಅಪೇಕ್ಷಿಸುವ ಮಹಾಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೀ ಸೂರ್ಯನ ಕುರಿತದ್ದೇ ಆಗಿದೆ.

ಶ್ರೀ ಸೂರ್ಯದೇವರಿಗೆ ಮುಖ್ಯ ಸ್ಥಾನ, ಭುರ್, ಭುವ, ಸ್ವಹಃ ಎಂಬ ಗಾಯತ್ರಿ ಮಂತ್ರದ ಪ್ರಕಾರವು ಶ್ರೀ ಸೂರ್ಯ ಮೂರು ಲೋಕದ ದೇವರು. ಯೋಗಶಾಸ್ತ್ರದಲ್ಲಿ ಎಲ್ಲಾ ವ್ಯಾಯಾಮಗಳನ್ನು ಒಳಗೊಂಡಂತಹ ಒಂದು ವಿಶೇಷ ಅಭ್ಯಾಸ ಎಂದರೆ ಶ್ರೀ ಸೂರ್ಯ ಮಂತ್ರಪೂರ್ವಕ ಶ್ರೀ ಸೂರ್ಯ ನಮಸ್ಕಾರ. ಹಿಂದೂಧರ್ಮದ ಪುನರುತ್ಥಾನಕ್ಕೆ ಕಾರಣಿಕ ಪುರುಷರು ಶ್ರೀಮದ್ ಶಂಕರಾಚಾರ್ಯರು ಎಲ್ಲ ಪಂಥದವರನ್ನು ಒಗ್ಗೂಡಿಸಲು ಪಂಚಾಯತನದ ಪೂಜಾಪದ್ಧತಿಯನ್ನು ಪ್ರಾರಂಭಿಸುವಾಗ ಶ್ರೀ ಶಿವ, ಶ್ರೀ ವಿಷ್ಣು, ಶ್ರೀ ದೇವಿ, ಶ್ರೀ ಗಣಪತಿಯೊಂದಿಗೆ ಐದನೆಯವರಾಗಿ ಆರಾಧಿಸಲ್ಪಡುವವರು ಶ್ರೀ ಸೂರ್ಯನಾರಾಯಣ ದೇವರು. ಜ್ಯೋತಿಶಾಸ್ತ್ರವು ನವಗ್ರಹಗಳ ಮೇಲೆ ಚಿಂತನೆ ಮಾಡುವುದಾದರೂ ನವಗ್ರಹಗಳಲ್ಲಿ ರಾಜ ಗ್ರಹ ಸೂರ್ಯ.

ಶ್ರೀ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಉತ್ಸವಗಳು

ಮಹಾರಥೋತ್ಸವ – ಮಾಘ ಮಾಸ ಸಪ್ತಮಿ
ಪ್ರತಿಷ್ಠಾ ಮಹೋತ್ಸವ – ಫೆಬ್ರವರಿ 1
ಅರ್ಕ ಪೂಜೆ – ಏಪ್ರಿಲ್ ತಿಂಗಳು
ಸಾಮೂಹಿಕ ಸೀಯಾಳಭೀಷೇಕ – ಮೇ ತಿಂಗಳು
ನಾಗರಪಂಚಮಿ – ಶ್ರಾವಣ ಶುದ್ಧ ಪಂಚಮಿ
ಗಣೇಶ ಚತುರ್ಥಿ – ಭಾದ್ರಪದ ಶುದ್ಧ ಚತುರ್ಥಿ
ಸೋಣಾರತಿ – ಕನ್ಯಾ ಸಂಕ್ರಮಣ
ನವರಾತ್ರಿ – ಅಶ್ವಿಜ ಮಾಸ
ತುಳಸಿ ಪೂಜೆ – ಕಾರ್ತಿಕ ಶುದ್ಧ ದ್ವಾದಶಿ
ಬಲಿ ಪಾಡ್ಯ – ಮಾರ್ಗಶಿರ ಶುಕ್ಲ ಪ್ರತಿಪದೆ

ಪ್ರತಿದಿನದ ಪೂಜೆಯ ಸಮಯ

ಬೆಳಿಗ್ಗೆ – 6 ಘಂಟೆ
ಮಧ್ಯಾಹ್ನ – 12 ಘಂಟೆ
ರಾತ್ರಿ – 8 ಘಂಟೆ

About Pavanesh D

Pavanesh D

Leave a Reply