Home / All / Seetha Falls

Seetha Falls

Kudlu Theertha Falls


Kudlu Theertha Falls is a picturesque waterfall located at a distance of 42 Km from Udupinear Hebri.

Kudlu Theertha Falls is located amid jungles of Western Ghats in Udupi district and recognized as the first water fall of river Sita.

The water falls from a height of 126 feet directly to the pond. It is believed that this pond is holy because many sages performed penance here many years ago.

There is another water fall above Kudlu Theertha called Manga Theertha (Monkey Theertha) because only Monkeys can reach this water fall as the path is very steep inside the forest.

How to reach Kudlu Theertha:

Hebri is located on Udupi – Agumbe Road (State Highway – SH65)

To trek to Kudlu Theertha Falls one has to take a left deviation before 6 km to Hebri, another left after another 3-4 km. The road will end at the banks of river Sita. There is a Burma bridge on the right side to cross the river. After that one has to walk for 4 km inside the jungle. There will be a small stream which has to be crossed to reach the foothills and from here a 3-4 km of trekking will take you to the beautiful Kudlu Theertha.

 

 

ಕೂಡ್ಲು ತೀರ್ಥ ಜಲಪಾತ /ಸೀತಾ ಫಾಲ್ಸ್

ಕೂಡ್ಲು ತೀರ್ಥ ಜಲಪಾತ ಹೆಬ್ರಿಯಿ೦ದ ೨೦ ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ಸೀತಾ ನದಿಯ ಉಗಮ ಸ್ಥಳವಾಗಿದ್ದು, ರಸ್ತೆ ಸ೦ಪರ್ಕದಿ೦ದ ೪ ಕಿ.ಮೀ. ದೂರದಲ್ಲಿದೆ. ೪ ಕಿ.ಮೀ. ಚಾರಣದ ನ೦ತರ ರಮ್ಯ ಮನೋಹರ ಜಲಪಾತವು ಎದುರುಗೊಳ್ಳುವುದು. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ಮುದ ನೀಡುವುದು.

ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಪಡೆದಿರುವ ಆಗುಂಬೆಯ ದಟ್ಟ ಕಾನನದ ಕಾಲುದಾರಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಇರುವ ಕೂಡ್ಲು ತೀರ್ಥವು ಬಳವಳಿದು ಅರಸಿ ಬಂದ ಮನಕೆ ಚೆಲುವಿನಿಂದ ಮನಸೂರೆಗೊಳ್ಳುವಂತೆ ಮಾಡಿಬಿಡುತ್ತದೆ.

ದಟ್ಟ ಕಾನನದ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು 250 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ರಮಣೀಯತೆಯ ಅಪರಾವತಾರದಂತಹ ಕಂಪ ಸೂಸುತ್ತ ಭೋರ್ಗರೆಯುತ್ತ ಬೀಳುವ ದೃಶ್ಯ ನಿಜಕ್ಕೂ ನಡೆದು ಬಂದ ದಣಿವೆಲ್ಲವನ್ನೂ ಇಂಗಿಸಿಬಿಡುತ್ತದೆ. ನಿತ್ಯ ಹರಿದ್ವರ್ಣದ ಕಾನನವನ್ನು ನೆನಪಿಸುವ ದಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಗಂಟೆಯ ನಡಿಗೆಯ ಪಯಣ ಚೇತೋಹಾರಿಯಾದದ್ದು. ಎತ್ತ ನೋಡಿದರೂ ಮುಗಿಲೆತ್ತರಕ್ಕೆ ಬೆಳೆದು ನಿಂತ, ಮುಂದಿನ ಹಾದಿಯೇ ಕಾಣಿಸದಷ್ಟು ಒತ್ತಾಗಿ ಬೆಳೆದು ನಿಂತ ವೃಕ್ಷ ರಾಶಿ, ಅಲ್ಲಲ್ಲಿ ಕಂಡೂ ಕಾಣದೆ ಸರಸರ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳ ಸಪ್ಪಳ, ಕಾಡು ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ, ದೂರದ ಸೀತಾ ನದಿಯ ಜಲಪಾತದ ಝಳು ಝಳು ಸದ್ದು ಹೀಗೆ ಎಲ್ಲವೂ ಪ್ರವಾಸಿಗರ ಪಯಣವನ್ನು ಆವಿಸ್ಮರಣೀಯಗೊಳಿಸುತ್ತದೆ.

ಗಗನದಿಂದ ಭುವಿಯತ್ತ ಒಮ್ಮೆಲೆಯೇ ಹೆಬ್ಬಂಡೆಗಳನ್ನು ಸೀಳಿಕೊಂಡು ದೊಪ್ಪೆಂದು ಧುಮ್ಮಿಕ್ಕುವ ಸೀತಾ ನದಿಯ ಕೂಡ್ಲು ತೀರ್ಥದ ಪರಿಸರ ನೋಡುಗರನ್ನು ಯಾವುದೇ ಒಂದು ಕಿನ್ನರ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ. ಜಲಪಾತದ ಒಂದು ಪಾರ್ಶ್ವದಲ್ಲಿ ಎಚ್ಚರಿಕೆಯಿಂದ ಝಳಕ ಮಾಡಲು ಅಡ್ಡಿಯಿಲ್ಲ. ನೆನಪಿರಲಿ, ಮಳೆಗಾಲದಲ್ಲಿ ಜಿಗಣೆಗಳ ಕಾಟ.

About Pavanesh D

Pavanesh D

Leave a Reply