?? Mangala Devi Temple :Mangalore | Namma Bhoomi
Home / All / Mangala Devi Temple :Mangalore

Mangala Devi Temple :Mangalore

ಇತಿಹಾಸ :
ಪಶ್ಚಿಮ ಸಮುದ್ರ ತೀರದಲ್ಲಿರುವ ತುಳು ರಾಜ್ಯವನ್ನು ಸೂರ್ಯವಂಶದ ವೀರಬಾಹು ಎಂಬ ರಾಜನು ಆಳುತ್ತಿದ್ದನು. ಅವನ ರಾಜಧಾನಿಯ ಸನಿಹದಲ್ಲೆ ಪರಶುರಾಮನ ತಪೊ ಭೂಮಿ ಇದ್ದು ಅದರ ಹತ್ತಿರದಲ್ಲೆ ಆಶ್ರಮವನ್ನು ನಿರ್ಮಿಸಿ ತಪೋಧರನಾದ ಭಾರಧ್ವಜ ಮುನಿಯ ಶಿಷ್ಯನಾಗಿದ್ದು ಅವರ ಪೂರ್ಣ ವಿಶ್ವಾಸ ಹಾಗೂ ಅನುಗೃಹಕ್ಕೆ ಪಾತ್ರನಾಗಿದ್ದನು. ಕಾಲ ಧರ್ಮ ಪ್ರಕಾರ ರಾಜನು ವೃದ್ದನಾಗಲು ತಪೋನಿಧಿಯಾದ ಭಾರಧ್ವಜ ಮುನಿಗಳಿಗೆ ಕೈ ಮುಗಿದು ಮುನಿವರ್ಯ ತಮ್ಮ ಪೂರ್ಣಾನುಗೃಹದಿಂದ ನಾನು ಧನ್ಯಥಾ ಭಾವವನ್ನು ಹೊಂದಿರುವೆನು. ತಮ್ಮ ಕರುಣೆಯಿಂದ ಪ್ರಜಾ ಪರಿವಾರದವರು ಸುಖದಿಂದಿರುವರು. ಸ್ವಾಮಿ ಕಾಲಧರ್ಮದಂತೆ ನಾನೀಗ ವೃದ್ದನಾಗಿರುವೆನು. ಆಪ್ರಯುಕ್ತ ನಾನು ವಾನಪ್ರಸ್ಥಾಶ್ರಮವನ್ನು ಸೇರಬೇಕೆಂದಿರುವೆನು. ನಾನು ಸಂತಾನ ಹೀನನಾಗಿರುವುದರಿಂದ ಈ ತುಳುರಾಜ್ಯವನ್ನು ಯೋಗ್ಯನಾದ ಒಬ್ಬ ರಾಜನಿಗೆ ಕೊಡಬೇಕೆಂದಿರುವೆನು. ಮಹಾಮುನಿ ಶ್ರೇಷ್ಠರೆ ನನ್ನ ರಾಜ್ಯವನ್ನು ಬಂಗ ರಾಜನಿಗೆ ಉಚಿತವಾದ ದಾನ ಮಾಡುಕೊಟ್ಟು, ಮುಂದೆ ಭಗವಂತನ ಆರಾಧನೆಯಲ್ಲಿ ಕಾಲವನ್ನು ಕಳೆಯ ಬೇಕೆಂದಿರುವೆನು. ಈ ಕಾರ್ಯವು ಸುಗಮವಾಗಿ ನೆರೆವೇರುವಂತೆ ಅನುಗ್ರಹಿಸಬೇಕಾಗಿ ವಿನೀತ ಭಾವದಿಂದ ಬೇಡಿಕೊಂಡನು.

ಅರಸನಾದ ವೀರಬಾಹುವಿನ ಕೋರಿಕೆಗೆ ಮೆಚ್ಚಿಗೆ ಸೂಚಿಸುತ್ತಾ ಭಾರದ್ವಜ ಮುನಿಗಳು ಸಂತುಷ್ಟರಾಗಿ ಹಾಗೇಯೇ ಆಗಲೆಂದು ಹರಿಸಿದರು. ವೀರ ಬಾಹು ರಾಜನು ತನ್ನ ರಾಜ್ಯವನ್ನು ಬಂಗರಾಜನಿಗೆ ಒಪ್ಪಿಸಿ ತಾನು ಪತ್ನಿ ಸಮೇತನಾಗಿ ವಾನಪ್ರಸ್ಥಕ್ಕೆ ಹೊರಟು ಹೋದ ನಂತರ ಬಂಗರಾಜನು ಈ ತುಳು ನಾಡನ್ನು ವೈಭವದಿಂದ ಆಳ ತೊಡಗಿದ.

ಒಮ್ಮೆ ಬಂಗರಾಜನು ತನ್ನ ಅರಮನೆಯ ಹಂಸಕೂಲಿಕಾತಲ್ಪದಲ್ಲಿ ಮಲಗಿರಲು, ಬೆಳಗಿನ ಜಾವದಲ್ಲಿ ಶ್ರೀ ಮಂಗಳಾದೇವಿಯು ಸ್ವಪ್ನದಲ್ಲಿ ದರ್ಶನವನ್ನಿತ್ತು ರಾಜ ನಿನ್ನನ್ನು ಅನುಗ್ರಹಿಸಲಿಕ್ಕಾಗಿ ಪ್ರಸನ್ನಳಾಗಿರುವೆನು ನಾಬು ಮಂಗಳಾದೇವಿ, ನೇತ್ರಾವತಿ ಮತ್ತು ಪಾಲ್ಗುಣಿ ನದಿಗಳು ಸಂಗಮವಾಗಿ ಸಮುದ್ರ ಸೇರುವ ಸನೀಹದಲ್ಲಿ ನನ್ನ ಲಿಂಗ ರೂಪದ ಬಿಂಬದಲ್ಲಿ ಚೈತನ್ಯವನ್ನು ಹೊಂದಿರುವೆನು. ಇದೀಗ ಆಲಯವು ಕುಸಿದು ಬಿದ್ದು ಒಂದು ದಿಣ್ಣೆಯಂತೆ ಕಾಣುತ್ತದೆ. ನೀನು ಆ ದಿಣ್ಣೆಯನ್ನು ಸರಿಸಿದಾಗ ನನ್ನ ಬಿಂಬ ನಿನಗೆ ಕಾಣಿಸುವುದು ನೀನು ಅದೇ ಸ್ಥಳದಲ್ಲಿ ನನಗೊಂದು ಆಲಯವನ್ನು ನಿರ್ಮಿಸಿ ಬಿಂಬರೂಪದ ಲಿಂಗವನ್ನು ಪುನರ್ ಪ್ರತಿಷ್ಟಾಪಿಸು ಮತ್ತು ನನಗೆ ಧಾರಾಪಾತ್ರೆಯನ್ನಿಟ್ಟು ಹಾಗೆಯೇ ನನ್ನನ್ನು ಆರಾಧಿಸುತ್ತಿರು ನಿನಗೆ ಮಂಗಳವಾಗಲಿ. ಈ ಪುಣ್ಯ ಕಾರ್ಯದಿಂದ ನೀನು ಲೊಕೊತ್ತರವಾದ ಕಿರ್ತಿಯನ್ನು ಪಡೆಯುವಿ ಎಂದು ಹರಸಿ ಮಾಯವಾದಳು.

ಬಂಗರಾಜನು ಭಾರದ್ವಜ ಮುನಿಗಳಿಗೆ ನಮಿಸುತ್ತಾ ಪೂಜ್ಯ ಮುನಿವರ್ಯ ನಿಮ್ಮ ಅನುಗ್ರಹದಿಂದ ಶ್ರೀ ಮಂಗಳಾದೇವಿಯ ಬಿಂಬದ ಪುನರ್ ಪ್ರತಿಷ್ಟಾಪನೆ ನೆರವೇರಿತು. ಸ್ವಾಮಿ ಈ ಬಿಂಬಕ್ಕೆ ಧಾರಾಪಾತ್ರೆಯಾಗಿ ಬಂತು ದಯವಿಟ್ಟು ಶ್ರೀಮಂಗಳೆಯ ಈ ಕ್ಷೇತ್ರದ ಮಹಿಮೆಯನ್ನು ತಿಳಿಸಬೇಕೆಂದು ಪ್ರಾರ್ಥಿಸಿದನು.

ಭಾರದ್ವಜರು ಶ್ರೀ ಹರಿಯು ವರಹಾ ಮತ್ತು ನರಸಿಂಹ ಅವತಾರದ ಕತೆಯನ್ನು ಹೇಳಿ, ವರಹಾ ಅವತಾರವೆತ್ತಿ ವಧಿಸಿದ ಹಿರಣ್ಯಾಕ್ಷನ ಮಗಳಾದ ವಿಖಾಸಿನಿಯು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರಪಡೆದುದನ್ನು ವಿವರಿಸಿ ಆಕೆಗೆ ಶಿವನಿಂದ ಪಡೆದ ಮಗನಿಂದಾಗಿ ದೇವತೆಗಳೆಲ್ಲಾ ಸ್ವರ್ಗ ಬಿಡಬೇಕಾಗಿ ಬಂದುದನ್ನೂ ಹೇಳಿ ಆ ದುಷ್ಟದಾನವನ್ನು ವಧಿಸುವರೇ ತ್ರಿಲೋಕ ಪೂಜ್ಯಳಾದ ಮಹಾದೇವಿಯನ್ನು ಬ್ರಹ್ಮ ವಿಷ್ಣು ಶಿವರೊಂದಿಗೆ ದೇವತೆಗಳು ಒಂದಾಗಿ ಪ್ರಾರ್ಥಿಸಿದಾಗ ಶ್ರೀ ಮಂಗಳಾದೇವಿಯು ಪ್ರತ್ಯಕ್ಷಳಾಗಿ ದೇವತೆಗಳಿಗೆ ಅಭಯನೀಡಿ ಆ ದಾನವನ್ನು ವಧಿಸುವ ಕತೆಯನ್ನು ಹೇಳುವರು.

ಕೃಪೆ – ಕರ್ನಾಟಕ ದೇವಸ್ಥಾನಗಳ ಮಾಹಿತಿ

 

In Tulunadu, in the 10th century, Kundavarma, the most famous king of Alupa dynasty was ruling. Mangalore was the capital of his kingdom. At that time, there came two sages named Machhendranatha and Gorakanatha from Nepal. They reached Mangalapura, crossing the river Nethravathi. The place were they crossed the river came to be known as ‘Gorakdandu’. They chose a place near the bank of Nethravathi which was once the centre of activities of sage Kapila. He had his hermitage there and it was a great centre of education.’

Hearing about the arrival of the two saints the king came to meet them. Introducing himself as the king of Tulunadu he paid them his respects and offered all help and patronage. Pleased with the humility and virtues of the king they brought to his knowledge that his kingdom was a holy place and it was sanctified by the activities of holy saints and sages in the past. They requested him to grant them land so that they could build their hermitage and make it a centre of their religious activities under his protection and patronage.

For Kundavarma it was really a surprise to know that his land had such a hoary history. It was from these saints he came to know that once upon a time, in his land there existed a temple dedicated to mother Mangaladevi. He heard from them the story of Vikhasini, Andasura, Parashurama and the temple of Mangaladevi built by Parashurama. The two saints took the king to the places where all these historical events had taken place. They asked the king to dig the place and retrieve the Linga and the Dharapatra symbolising Mangaladevi and install them in a shrine along with Nagaraja for protection.

Kundavarma carried out the advice of the two sages. A grand shrine of Sri Mangaladevi stood on the holy place. The two sages themseleves guided and supervised the execution of the work. The temple attained special significance as Mother Magaladevi granted special favours, especially on maidens. Pious maidens who worship the goddess observing Mangaladharavrata (Swayamvara Parvathi) will heave their wishes fulfilled. They get husbands most suited for them.

Even today, heads of Kadri Yogirajmutt visit Mangaladevi temple on the first day of Kadri temple festival and offer prayer and silk cloth to the Goddess.

 

Sri Mangaladevi Darshan Timings

Morning : 6-00 a.m to 10.00 a.m.
Afternoon : 12-00 noon to 12-30 p.m. later at 1-00 p.m.
Evening : 4-00 p.m. to 8-30 p.m. (Fridays till 9-00 p.m.)

Daily Pooja timings

Morning Pooja at 6-00 a.m.
Afternoon Pooja at 1-00 p.m.
Evening Pooja at 8-30 p.m. (Fridays at 9-00 p.m.)

Please Note:

  • Karpura Arathi will not be performed at Sri Mangaladevi Sannidhi between 10-00 a.m. to 12-00 noon
  • Devotees who wish to offer gold jewelery, sarees and other donations are requested to obtain the acknowledgment receipts for the same from the temple counter.
  • Devotees who wish to offer Shashwatha Seva to the goddess are requested to pay Rs.1001/- for the same and register their name for the day they desire the pooja to be performed.
  • Donations(above Rs.100/-) towards Annadana are accepted at the temple counter and acknowledgment receipts will be given for the same.
  • Donations towards the Temple Renovation Funds are accepted at the temple counter and the acknowledgment receipts will be given for the same.
  • Devotees who require information regarding marriages conducted the temple are requested to inquire at the temple counter.

http://www.mangaladevitemple.com/

ಇತಿಹಾಸ : ಪಶ್ಚಿಮ ಸಮುದ್ರ ತೀರದಲ್ಲಿರುವ ತುಳು ರಾಜ್ಯವನ್ನು ಸೂರ್ಯವಂಶದ ವೀರಬಾಹು ಎಂಬ ರಾಜನು ಆಳುತ್ತಿದ್ದನು. ಅವನ ರಾಜಧಾನಿಯ ಸನಿಹದಲ್ಲೆ ಪರಶುರಾಮನ ತಪೊ ಭೂಮಿ ಇದ್ದು ಅದರ ಹತ್ತಿರದಲ್ಲೆ ಆಶ್ರಮವನ್ನು ನಿರ್ಮಿಸಿ ತಪೋಧರನಾದ ಭಾರಧ್ವಜ ಮುನಿಯ ಶಿಷ್ಯನಾಗಿದ್ದು ಅವರ ಪೂರ್ಣ ವಿಶ್ವಾಸ ಹಾಗೂ ಅನುಗೃಹಕ್ಕೆ ಪಾತ್ರನಾಗಿದ್ದನು. ಕಾಲ ಧರ್ಮ ಪ್ರಕಾರ ರಾಜನು ವೃದ್ದನಾಗಲು ತಪೋನಿಧಿಯಾದ ಭಾರಧ್ವಜ ಮುನಿಗಳಿಗೆ ಕೈ ಮುಗಿದು ಮುನಿವರ್ಯ ತಮ್ಮ ಪೂರ್ಣಾನುಗೃಹದಿಂದ ನಾನು ಧನ್ಯಥಾ ಭಾವವನ್ನು ಹೊಂದಿರುವೆನು. ತಮ್ಮ ಕರುಣೆಯಿಂದ ಪ್ರಜಾ ಪರಿವಾರದವರು ಸುಖದಿಂದಿರುವರು. …

Review Overview

User Rating: 4.9 ( 1 votes)
0

About Pavanesh D

Pavanesh D

Leave a Reply