Home / All / Kota Amritheshwari Temple Kota

Kota Amritheshwari Temple Kota

ಕೋಟ ಶ್ರೀ ಅಮೃತೇಶ್ವರೀ ದೇವಿಯನ್ನು ” ಹಲವು
ಮಕ್ಕಳ ತಾಯಿ ” ಎಂದು ಯಾಕೆ ಕರೆಯಲಾರಂಭಿಸಿದರು?

ಈ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ
ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ
ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ತನ್ನ ಅಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು.

ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಟನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು.
ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವ್ರತಾ ಪಾರಾಯಣಳು, ಸಾಧು ಸ್ವಭಾವದವಳು ಆಗಿದ್ದು ಸದಾಕಾಲ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು.
ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿ ಕೊಂಡು ಕುಂಭಮುಖಿಯು ವನದಲ್ಲಿ ಸಂಚಾರ
ಮಾಡುತ್ತಿರಲು ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಆಗ ಇದೇ ಮಾರ್ಗದಲ್ಲಿ ಎಕಮುಖಿ ಮಹರ್ಷಿಗಳ ಪತ್ನಿಯಾದ
ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ
ಹೊಂದಿದುದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯ ಪ್ರಬುದ್ಧನೂ, ಸುಂದರನೂ, ವಿಧ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ
ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು.

kota-amrutheshwari-1

ಹೀಗಿರಲು ಶೂರ್ಪನಖಿಯು ಪತಿಪ್ರಭೆಯ ಮಗನಾದ
ಆ ಋಷಿ ಕುಮಾರನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು
ಶೂರ್ಪನಖಿಯು ಬಲತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಎಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ, ಈ ಶಬ್ದವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು.
ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂತ ತಿಳಿದು, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ
ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ ” ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯು ಸ್ವರೂಪಳಾಗೆಂದು ” ಶಾಪ ಕೊಟ್ಟು ಸಮೀಪದಲ್ಲಿರುವ ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಳು.

ಈ ರೀತಿ ಋಷಿ ಪತ್ನಿಯ ಶಾಪದಿಂದ ದುಃಖತಪ್ತಳಾದ
ಕುಂಭಮುಖಿಯು ನಡೆದ ವಿಚಾರವನ್ನ ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಸುರನು ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲ ಪುರೋಹಿತರಾದ
ಶುಕ್ರಾಚಾರ್ಯರಲ್ಲಿ ಮೊರೆಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು ಖರಸುರನಲ್ಲಿ ಮಾಯಸುರನಿಂದ ನಿರ್ಮಿತವಾದ ಜ್ಯೇಷ್ಠ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು, ಜೋತೆಗೆ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಂಬಿಕೆಯಾದ ಅಮೃತೇಶ್ವರೀ ದೇವಿಯನ್ನ
ಪೂಜಿಸಬೇಕೆಂದು ತಿಳಿಸಿದರು.

ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ
ಶುಕ್ರಾಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ (ಗಿಳಿಯಾರು, ಹರ್ತಟ್ಟು) ಪ್ರತಿಷ್ಠಿಸಿದನಲ್ಲದೇ ಸಮೀಪದಲ್ಲಿಯೇ ಜಗನ್ಮಾತೆಯಾದ ಅಮೃತೇಶ್ವರೀ
ದೇವಿಯನ್ನು ಪತಿಷ್ಠಿಸಿ ದಂಪತಿಗಳೀರ್ವರು
ಶುಕ್ರಾಚಾರ್ಯರು ತಿಳಿಸಿದಂತೆ ಉಮಾಮಹೇಶ್ವರರನ್ನು ಪೂಜಿಸುತ್ತಿದ್ದರು. ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ
ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು
ಪ್ರತ್ಯಕ್ಷನಾಗಿ ಜ್ಞಾನೋಪದೇಶ ಮಾಡಿದನಲ್ಲದೇ ” ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ದ ಮಾಡಿ ಮುಕ್ತಿ ಹೊಂದುವಿ
” ಎಂದು ವರವನ್ನು ಅನುಗ್ರಹಿಸಿ, ಅಲ್ಲಿಯವರೆಗೆ
ಇದೇ ಸ್ಥಳದಲ್ಲಿ ನೀನು ಪ್ರತಿಷ್ಠಿಸಿದ ಜ್ಯೇಷ್ಠ ಲಿಂಗವನ್ನು ಅರ್ಚಿಸುತ್ತಾ ಇರು. ಅಲ್ಲದೇ ನಿನ್ನ ನಿತ್ಯಕರ್ಮಾನುಷ್ಠಾನಗಳ ಅನುಕೂಲಕ್ಕಾಗಿ
ಸರ್ವತೀರ್ಥ ಸಾನಿಧ್ಯಾ ಉಳ್ಳ ಸರೋವರವನ್ನು
ನಿರ್ಮಿಸುತ್ತೇನೆಂದು ತಿಳಿಸಿದನಲ್ಲದೇ ಈ ಸರೋವರದಲ್ಲಿ ಗಂಗಾದಿ ಸಕಲ ತಿರ್ಥಗಳು ಸನ್ನಿಹಿತವಾಗಿರುತ್ತವೆ. ಇನ್ನು ಮುಂದೆ ಈ ಸರೋವರವು ” ವರುಣ ತೀರ್ಥವೆಂದು
ಪ್ರಸಿದ್ದವಾಗಲಿ ” ಎಂದು ಹರಸಿ ಅಂತರ್ಧಾನ ಹೊಂದಿದನು.

ಇದೇ ರೀತಿ ಕುಂಭಮುಖಿಯ ತಪಸ್ಸಿಗೂ ಮೇಚ್ಚಿದ ಅಮೃತೇಶ್ವರೀಯು ಪ್ರತ್ಯಕ್ಷಳಾಗಿ ಕುಂಭಮುಖಿಯಲ್ಲಿ ” ಬೇಕಾದ ವರಗಳನ್ನು ಕೇಳು ” ಎನ್ನಲು ದೇವಿಯ
ದಿವ್ಯಸ್ವರೂಪದರ್ಶನದಿಂದ ಉಂಟಾದ
ಸಂತೋಷಾತಿಶಯದಿಂದಲೂ ಋಷಿ ಪತ್ನಿಯ ಶಾಪ
ಪ್ರಭಾವದಿಂದಲೂ ಭ್ರಾಂತಳಾಗಿದ್ದ ಕುಂಭಮುಖಿಯು ದೇವಿಯಲ್ಲಿ ” ತಾಯೇ ನೀನು ನಿತ್ಯ ಯೌವನೆಯಾಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ ” ಎಂದು ಬೇಡಿದಳು.

ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಕುಂಭಮುಖಿಯಲ್ಲಿ ” ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯವಿಲ್ಲದ
ಕಾರಣದಿಂದಲೇ ” ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು ” ಎಂದು ಕೇಳುವ ಬದಲು ” ನೀನು ಮಕ್ಕಳನ್ನು ಪಡೆ ” ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ… ಇನ್ನು ಕೆಲವೇ ಸಮಯದ ನಂತರ ಇಲ್ಲಿಗೆ
ಆಗಮಿಸುವ ಶ್ರೀ ರಾಮಚಂದ್ರನಿಂದ ನಿನ್ನ ಪತಿಯಾದ ಖರಾಸುರನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ನೀನು ಕೂಡಾ ಅನಾಯಾಸವಾಗಿ ಇಲ್ಲಿಯೇ ನೆಲೆಸಿರುವ ನನ್ನಲ್ಲಿ
ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಲದಲ್ಲಿ ಶಿವಲಿಂಗ ಸದ್ರಶ್ಯವಾದ ಲಿಂಗಗಳು ಆಗಾಗ ಉತ್ಪತ್ತಿಯಾಗಿತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು ” ಹಲವು ಮಕ್ಕಳ ತಾಯಿ ” ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ ” ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದಳು.

ಕೆಲವು ಕಾಲಗಳ ನಂತರ ಸೀತಾ ಸಹಿತನಾದ ಶ್ರೀ
ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನಿಗೂ ಶ್ರೀ ರಾಮನಿಗೂ ಯುದ್ಧವಾಯಿತು. ಶಿವನ ವರಪ್ರಸಾದದಿಂದ ಶ್ರೀ ರಾಮನೇ
ಮಹಾವಿಷ್ಣುವಿನ ಅವತಾರವೆಂದು ತಿಳಿದು ಖರಾಸುರನು ಯುದ್ಧ ಮಾಡಿ ಮುಕ್ತಿಯನ್ನು ಹೊಂದಿದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿ ಸನ್ನಿಧಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯನ್ನು ” ಹಲವು
ಮಕ್ಕಳ ತಾಯಿ ” ಎಂದು ಕರೆಯಲಾರಂಭಿಸಿದರು.
ಈಗ ಈ ಹೆಸರೇ ಪ್ರಸಿದ್ಧವಾಗಿದೆ.
ಲೇಖನ : ಭರತ್ ಕೃಷ್ಣ

Courtesy : Beauty of Tulunad

 

Long Long ago there lived a devil, Kharasura by name in Dandakaranya. He was a close relative of Ravanasura. He was ruling over Dandakaranya which was situated to the north of Lanka as per the orders of Ravana. He was assisted by his wife Kumbhamukhi, sister Shoorpanakha and his followers Dushana and Trishira.

In spite of being a Rakshasa, Khara was pious and a great warrior. He was also a devotee of Lord Shiva. His wife Kumbhamukhi was very loyal to her husband and a kind lady. She was also worshipping Parvathi and Parameshwar with her husband.

One day it so happened that Kumbhamukhi and Shoorpanakha were moving leisurely in the forest and they were separated as they went in search of flowers and honey in different directions. In the same path, Athiprabha, the widow of sage Yekamukhi was travelling with her son Bahushrutha to visit the holy place khashi. Her son was a young, handsome and well educated youth.

As Shoorpanakha came along the way and met Athiprabha and Bahushrutha, she was charmed by his grace as she was a busy young widow. She requested him to marry her and when he rejected the proposal, she attacked him and killed him in anger. Athiprabha grieved on the death of her lonely son. Hearing her grief Kumbhamukhi came to the spot and Athiprabha cursed Kumbhamukhi not to have any children. She did so thinking that she was Shoorpanakha who killed her son. Later she realized her fault and cursed Shoorpanakha to become the destroyer of her dynasty after being attracted and rejected by a handsome person. Then she jumped into a deep trench and committed suicide. Kumbhamukhi worried deeply and told everything to her husband Kharasura. Kharasura consoled his wife and began to think how to get rid of this curse and get children. He sought the help of his guru Shukracharya. Acharya suggested him to go to Mayasura and bring a Jyesta Linga made by him. He also said to him to worship the Linga for full one year period and his wife should worship Amritheshwari ( mother of the whole world) with great devotion.

As Kharasura requested Mayasura to give a Linga, Mayasura, the devil sculptor made it within no time and handed over to him. Khara erected the Linga in Shukapura(Giliyaru) and constructed a beautiful Temple. He also erected Amritheshwari very close to this Shiva Temple. Both husband and wife worshipped sincerely God shiva and Goddess Parvathi.

One day God Shiva pleasantly appeared before Khara and blessed him that he would attain deliverance by fighting a battle with Ramachandra who would be an ‘Avatar’ of Maha Vishnu. He also advised him to continue the worship of Shiva there itself and to assist his worship, God Shiva constructed a beautiful lake filled with holy waters of the Ganga. That lake became famous in the name of “Varuna Theerth”.

In the same way Amritheshwari was pleased with Kumbhamukhi and told her to ask a boon to her after appearing before her. But due to her overjoy Kumbhamukhi was utterly confused and said to the Goddess that she would get eternal youth hood and give birth to a number of children like Shiva himself. The Goddess granted the boon.

Amritheshwari still told that due to the curse of the Athiprabha she had no privilege to get children and hence she said to the Goddess to have children instead of asking them for her. Still the Goddess gave a providence to her that she would reach and mix up with her at the time of spiritual liberation of Khara by Ramachandra. She also said that often Shivalinga type Lingas would come up in the same place. Kumbhamukhi should assume those Lingas as her children. Therefore Amritheshwari would be called by the name “Mother of many children” (Halavu Makkala Tayi) and she would bless the devotees by staying there itself.

After sometime Shri Rama came with Sita for his fourteen years forest life. He fought with Khara and Khara met his end and attained moksha. Kumbhamukhi by a long time meditation attained deliverance by uniting herself with Amritheshwari. From that day Shivalingas started to arise at the divine place of Goddess Amritheshwari. Since then Amritheshwari is called “ Halavu Makkala Tayi”.

After the death of Khara and Dushana, the sages and ‘rishis’ were performing the holy rituals without fear. Bahushrutha who met an untimely death by Shoorpanakha had become a “Bramharakshasa” (demon) due to his blunders in his previous life. He was giving a lot of troubles to sages and saints. Once when one “Yaga” was being performed in the temple of Amritheshwari by the sages, Bramharakshasa came and took away the offerings. When they came to know this, they prayed to goddess Amritheshwari to provide relief from the demon.

Goddess understood their difficulties and took mercy on them. She told the sages to worship her with meat and liquor and she would come in the incarnation of “Mari”. She promised the sages that she would have in two forms one like merciful Amritheshwari and another like cruel Mari form. So saying the Goddess killed the Bramharakshasa and granted him “Moksha”.

Since then the Goddess is staying in two forms and granting blessings by removing the diseases and maintaining the welfare of all. Infront of her there is one stone image of “Raktheshwari”. There are also some accompanying gods like ‘Veera Bhadra’, ‘Naga Devata’, Wooden images of Bobbarya, Ummalthi, Chikku, Nandi and Panjurli. Varuna Theertha is to the South of Amritheshwari Temple. In between all these Gods majestic Amritheshwari stays. In a short distance there are the temples of “Raja Shekhara” and “Hire Mahalingeshwara”.

Daily worship of the Goddess is performed by the people belonging Jogi dynasty through the ages. They are having the ”Natha” tradition and it is the unique feature of this temple.

ಕೋಟ ಶ್ರೀ ಅಮೃತೇಶ್ವರೀ ದೇವಿಯನ್ನು ” ಹಲವು ಮಕ್ಕಳ ತಾಯಿ ” ಎಂದು ಯಾಕೆ ಕರೆಯಲಾರಂಭಿಸಿದರು? ಈ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ತನ್ನ ಅಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಟನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. …

Review Overview

User Rating: 4.9 ( 1 votes)
0

About Pavanesh D

Pavanesh D

Leave a Reply