Home / All / DK CHOWTA

DK CHOWTA

ಶ್ರೀ ದರ್ಬೆ ಕೃಷ್ಣಾನಂದ ಚೌಟ (ಡಿ.ಕೆ.ಚೌಟ)
ಕ್ಷೇತ್ರ: ತುಳು ಸಾಹಿತ್ಯ
೧೯೩೮ರ ಜೂನ್ ತಿಂಗಳ ಮೊದಲ ದಿನದಂದು ಮಂಜೇಶ್ವರ ತಾಲೂಕಿನ ಮೀಯಪದವು ದರ್ಬೆಯ ಹೆಸರಾಂತ ಚೌಟ ಕೃಷಿಕ ಕುಟುಂಬದಲ್ಲಿ ನಾರಾಯಣ ಚೌಟ ಮತ್ತು ಮೋಹಿನಿ ಚೌಟ ದಂಪತಿಗಳ ಮಗನಾಗಿ ಕೃಷ್ಣಾನಂದರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮಂಜೇಶ್ವರದಲ್ಲಿ ಪಡೆದು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಮುಗಿಸಿ ಮುಂಬೈಯ ವಿಶ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪಡೆದರು. ಎಳೆವಯಸ್ಸಿನಲ್ಲಿಯೇ ಅವರಿಗೆ ಕಲೆ ಮತ್ತು ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಮುಂಬೈಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಪ್ರದರ್ಶನವನ್ನು ತೋರಿಸಿ ಕೊಟ್ಟವರು ಕೃಷ್ಣಾನಂದರು.
ಮುಂದೆ ಎರಡು ವರ್ಷದ ಬಳಿಕ ಸಾಗರೋಲ್ಲಂಘನೆ, ಪಶ್ಚಿಮ ಆಫ್ರಿಕಾದ ಘಾನಾ ಮತ್ತು ನೈಜೀರಿಯಾದಲ್ಲಿ ಇಪ್ಪತ್ತೈದು ವರ್ಷ ಉದ್ಯಮಿಯಾಗಿದ್ದು, ಅಲ್ಲಿಂದ ಬೆಂಗಳೂರಿಗೆ ಬಂದು ರಫ್ತು ವ್ಯವಹಾರದಲ್ಲಿ ತನ್ನನ್ನು ತೊಡಗಿಸಿ ಕೊಂಡ ಚೌಟರು ವ್ಯವಹಾರದಲ್ಲಿ ಭಾರತ ಸರ್ಕಾರದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದರು ಮುಂದೆ ರಫ್ತು ವ್ಯವಹಾರಕ್ಕಾಗಿಯೇ ಸ್ಥಾಪಿಸಿದ ಪವರ್ ಗೇರ್ ಸಂಸ್ಥೆಯಿಂದ ಅಮೇರಿಕದ ಜನರಲ್ ಎಲಕ್ಟ್ರಿಕಲ್ಸ್ಗೆ ವಿದ್ಯುತ್ ಸಾಮಾಗ್ರಿಗಳನ್ನು ರಫ್ತು ಮಾಡಿ ಪ್ರಶಸ್ತಿ ಗಳಿಸಿದರು.
ಉದ್ಯಮದಿಂದ ಸ್ವಯಂ ನಿವೃತ್ತಿ ಪಡೆದ ಚೌಟರು ಬಂಟರ ಸಂಘ ಬೆಂಗಳೂರಿನ ಅಧ್ಯಕ್ಷರಾಗಿ ಬಂಟರ ಪ್ರಥಮ ವಿಶ್ವ ಸಮ್ಮೇಳನ ನಡೆಸಿಕೊಟ್ಟು ಪ್ರಶಂಸೆಗೆ ಪಾತ್ರರಾದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ನಾಲ್ಕು ವರ್ಷ ಚಿತ್ರಕಲಾ ಪರಿಷತ್ತನ್ನು ನಡೆಸಿಕೊಟ್ಟ ಚೌಟರು ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ, ಬಿ.ಎಲ್. ಶಂಕರ್ ಮುಂತಾದವರೊಂದಿಗೆ ಚಿತ್ರಕಲಾ ಪರಿಷತ್ತನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು ಜಗತ್ತಿನಲ್ಲೇ ಪ್ರಥಮಬಾರಿಗೆಚಿತ್ರಸಂತೆಯೆಂಬ ವಿನೂತನ ಕಾರ್ಯಕ್ರಮ ಹುಟ್ಟು ಹಾಕಿ ನಡೆಸಿಕೊಟ್ಟ ಹೆಗ್ಗಳಿಕೆ ಚೌಟರದ್ದು.
ಅದೇ ಸಮಯದಲ್ಲಿ ಬೆಂಗಳೂರಿನ ತುಳುಕೂಟದ ರಜತಮಹೋತ್ಸವದ ಸಮಿತಿಯ ಅಧ್ಯಕ್ಷರಾಗಿ ಅದ್ಧೂರಿಯ ತುಳು ಸಮ್ಮೇಳನ ನಡೆಸಿಕೊಟ್ಟವರು ಚೌಟರು. ಸಮಯದಲ್ಲಿ ಬರಹದಲ್ಲಿ ತೊಡಗಿಸಿಕೊಂಡ ಚೌಟರುಕರಿಯವಜ್ಜೆರನ ಕತೆಗಳು’, ಪಿಲಿಪತ್ತಿಗಡಸ್’, ‘ಪತ್ತ್ಪಜ್ಜೆಲು’, ಧರ್ಮೆತ್ತಿಮಾಯೆ’ , ‘ಉರಿಉಷ್ಣದ ಮಾಯೆಮತ್ತುಮಿತ್ತಬೈಲ್ ಯಮುನಕ್ಕೆಯೆಂಬ ಕೃತಿಗಳನ್ನು ತುಳು ಸಾಹಿತ್ಯಕ್ಕೆ ಕಾಣಿಕೆಯಾಗಿ ಕೊಟ್ಟರು. ‘ಕರಿಯಜ್ಜೆರೆನ ಕತೆಗಳು’, ಪಿಲಿಪತ್ತಿಗಡಸ್’, ಮಿತ್ತಬೈಲ್ ಯಮುನಕ್ಕೆಕಾದಂಬರಿಗೆ ಪಣಿಯಾಡಿ ಪ್ರಶಸ್ತಿ ಸಂದೇಶ ಪ್ರಶಸ್ತಿಗಳು ಬಂದಿವೆ. ಕಾದಂಬರಿಯು ಕನ್ನಡಕ್ಕೆ ಅನುವಾದಗೊಂಡು ಅನುವಾದಕರಿಗೂ ಪ್ರಶಸ್ತಿ ತಂದಿವೆ.
ನಾಟಕಪಿಲಿಪತ್ತಿಗಡಸ್’, ಸುಮಾರು ಇನ್ನೂರು ಪ್ರದರ್ಶನಗಳನ್ನು ಕಂಡಿವೆ. ‘ಕರಿಯವಜ್ಜೆರನ ಕತೆಗಳು’, ‘ಪಿಲಿಪತ್ತಿಗಡಸ್’, ‘ಧರ್ಮೆತ್ತಿಮಾಯೆ’, ‘ಮಿತ್ತಬೈಲ್ ಯಮುನಕ್ಕೆಕನ್ನಡಕ್ಕೆ ಅನುವಾದವಾಗಿದೆ. ಈಗಮಿತ್ತಬೈಲ್ ಯಮುನಕ್ಕೆಇಂಗ್ಲೀಷ್ ಭಾಷೆಗೆ ಅನುವಾದವಾಗುತ್ತಿದೆ. ‘ಮಿತ್ತಬೈಲು ಯಮುನಕ್ಕೆಕನ್ನಡದಲ್ಲಿ ನಾಟಕ ರೂಪ ಪಡೆದು ಪ್ರದರ್ಶನವಾಗುತ್ತಿದೆ. ಅವರ ಹಲವು ನಾಟಕಗಳು ಟಿ.ವಿ. ಮಾಧ್ಯಮದಲ್ಲೂ ಬಂದಿವೆ.
ಚೌಟರು ತನ್ನ ಮಾತೃಭಾಷೆಯಾದ ತುಳುವಿನಲ್ಲಿ ಮಾತ್ರ ಬರೆಯುತ್ತೇನೆಂದು ಹೊರಟವರು ವಿದ್ವಾಂಸರಾದ ಲಿಂಗದೇವರು ಹಳೇಮುನಿ, ಡಾ| ಯು.ಪಿ. ಉಪಾಧ್ಯಾಯ ಮುಂತಾದವರು ತುಳು ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡೆದಿದ್ದರೆಮಿತ್ತಬೈಲ್ ಯಮುನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುತ್ತಿತ್ತು ಎಂದಿದ್ದಾರೆ. ೨೦೧೦ನೇ ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ| ಉಪಾಧ್ಯಾಯರು ಅಧ್ಯಕ್ಷ ಸ್ಥಾನದಿಂದ ತುಳುವಿನ ಕಾದಂಬರಿ ನೊಬೆಲ್ ಪ್ರಶಸ್ತಿಗೂ ಜಗತ್ತಿನ ಹಲವು ಕೃತಿಗಳೊಂದಿಗೆ ಪರಿಗಣಿಸಲ್ಪುತ್ತಿತ್ತು ಎಂದಿದ್ದಾರೆ. ಡಾ| ಬಿ.. ವಿವೇಕ್ ರೈಯವರು ಇದನ್ನು ತುಳುವಿನ ಸಂಕಥನ ಗಾಥಾ ಎಂದಿದ್ದಾರೆ. ಯು.ಆರ್.ಅನಂತಮೂರ್ತಿಯವರು ಡಿ.ಕೆ. ಚೌಟರ ತುಳು ಕಾದಂಬರಿಮಿತ್ತಬೈಲ್ ಯಮುನಕ್ಕೆಭಾರತೀಯ ಭಾಷೆಗಳಲ್ಲಿ ಸೃಷ್ಟಿಯಾದ ಉತ್ತಮ ಕಾದಂಬರಿಗಳಲ್ಲಿ ಒಂದು ಎಂದು ನಾನು ತಿಳಿಯುವಾಗ ಚೌಟರ ಪ್ರತಿಭೆಯನ್ನು ಆಡುಮಾತಾದ ತುಳುವಿನ ಸಾಹಿತ್ಯಕ ಸಾಧ್ಯತೆಗಳನ್ನು ಒಟ್ಟಾಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಚೌಟರಿಗೆ ಅವರ ಉದ್ಯಮಕ್ಕೆ ಕೃಷಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಸಂಸ್ಕೃತಿಯ ಸಂಘಟಕ ರಂಗಭೂಮಿಯ ಪ್ರೋತ್ಸಾಹಕ ಕಲೆಯ ಸಂಗ್ರಾಹಕ ಸಾಹಿತ್ಯದ ವಿದ್ಯಾರ್ಥಿ ಕೃಷಿಕ ಸಾಮಾಜಿಕ ಸಂಘಟನೆಗೆ ಹೀಗೆ ಸಮಾಜ ಹಲವು ರೀತಿಯಲ್ಲಿ ಅವರನ್ನು ಗುರುತಿಸಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಚಿತ್ರಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಪಣಿಯಾಡಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಸ್ತುತ ತುಳು ಸಾಹಿತ್ಯಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀ ಚೌಟರು ಪ್ರಸ್ತುತ ಮೀಯಪದವಿನ ಚೌಟರ ಚಾವಡಿ ಟ್ರಸ್ಟಿನ ಅಧ್ಯಕ್ಷರಾಗಿ, ಬೆಂಗಳೂರು ರಂಗಚೇತನ ಟ್ರಸ್ಟಿನ ಅಧ್ಯಕ್ಷರಾಗಿ, ಬೆಂಗಳೂರು ರಂಗ ನಿರಂತರ ಸಂಘಟನೆಯ ಅಧ್ಯಕ್ಷರಾಗಿ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ, ಮಂಗಳೂರು ಸರಕಾರಿ ಕಾಲೇಜಿನ ಅಲುಮನಿ ಅಸೋಸಿಯೇಶನ್ ಅಧ್ಯಕ್ಷರಾಗಿ, ಕಾಂತಾವರ ಅಲ್ಲಮ ಪ್ರಭು ಪೀಠದ ಅಧ್ಯಕ್ಷರಾಗಿ, ಬೆಂಗಳೂರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂತಹ ಅಪೂರ್ವ ಸಾಧಕರಾದ ಶ್ರೀ ದರ್ಬೆ ಕೃಷ್ಣಾನಂದ ಚೌಟ (ಡಿ.ಕೆ. ಚೌಟ) ಇವರನ್ನು ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ೨೦೧೦ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲು ಸಂತೋಷ ಪಡುತ್ತಿದೆ.

 

 

About Pavanesh D

Pavanesh D

Leave a Reply