Home / All / Dharma Devethegala Dhootha Anappa Swamy

Dharma Devethegala Dhootha Anappa Swamy

ಧರ್ಮದೇವತೆಗಳ ದೂತ ಅಣ್ಣಪ್ಪ ಸ್ವಾಮಿ:

ಅಣ್ಣಪ್ಪ ಸ್ವಾಮಿ ಧರ್ಮದೇವತೆಗಳ ಆಜ್ಯ್ನಾವರ್ತಿ . ಅವರ ಆಣತಿಯಂತೆ ಮಂಗಳೂರಿನ ಕದೀರೆ ಎಂಬಲ್ಲಿಂದ ಮಂಜುನಾಥ ಸ್ವಾಮಿಯ ಲಿಂಗವನ್ನು ಹೊತ್ತು ತಂದವನು . ಪ್ರಥಾಪದಲ್ಲಿ ಧರ್ಮದೇವತೆಗಲಿಗಿಂತ ಒಂದು ಕೈ ಮಿಗಿಲು! ಅವನ ಮಹಿಮೆಯ ಪ್ರಚಂಡತೆಯ ಅರಿವಿದ್ದವರಿಗೆ ಅವನೆಂದರೆ ವಾಂಛೆ, ಅಷ್ಟೇ ಬೀತಿ, ಅಷ್ಟೇ ದಿಗಿಲು. ಅಷ್ಟೇ ಅಲ್ಲ , ‘ಧರ್ಮಸ್ಥಳ ‘, ಮಂಜುನಾಥ ‘ಎಂಬ ಸೊಲ್ಲೆತ್ತಲೂ ಅಂಜುವ ಭಕ್ತರು ‘ ಹೊಳೆಯಾಚೆಯ ದೇವರು’, ‘ಘಟ್ಟದ ಕೆಳಗಿನ ದೇವರು’,’ಸ್ಥಳದ ಸ್ವಾಮಿ’ ಎಂದು ಭಯಭಕ್ತಿಯಿಂದ ಉಚ್ಚರಿಸುತ್ತಾರೆ.

‘ಧರ್ಮಸ್ಥಳದ ಸಮಗ್ರ ಚಟುವಟಿಕೆಗಳ ರೂವಾರಿ’ ಎಂಬುದು ಅಣ್ಣಪ್ಪನಿಗಿರುವ ಪ್ರತೀತಿ. ಅವನ ವಾಸ್ತವ್ಯ ನೆಲೆಯಾದ ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಮೇಲಿನ ನೇಮ ವನ್ನು ಸ್ತ್ರೀಯರು ನೋಡುವಂತಿಲ್ಲ. ಬೆಟ್ಟ ಏರಲು ಸ್ತ್ರೀಯರಿಗೆ ಅವಕಾಶವೇ ಇಲ್ಲ. ಅಂಥ ಕಟ್ಟುನಿಟ್ಟಿನ, ಅಖಂಡ ಸಾಮರ್ಥ್ಯದ ಬೆಟ್ಟದ ಮೇಲಿನ ಅಣ್ಣಪ್ಪ ಸ್ವಾಮಿಗೆ ಧರ್ಮದೇವತೆಗಳ ನೆಲೆಯನಿಸಿದ ನೆಲ್ಯಾಡಿ ಬೀಡಿನಲ್ಲಿ ಈ ಶತಮಾನದ ಮೊತ್ತಮೊದಲ ಮಹಾನಡಾವಳಿಯ ನೇಮೋತ್ಸವ ನಡೆದಾಗ ಕಿಕ್ಕಿರಿದು ನೆರೆದ ಲಕ್ಷಕ್ಕೂ ಮೀರಿದ ಭಕ್ತರು ನೇಮ ನೋಡಿ ಪುಳಕಗೊಂಡರು. ಸ್ತ್ರೀಯರಿಗೆಗಂತೂ 53 ವರ್ಷಗಳ ಬಳಿಕ ದೊರೆತ ಅತ್ಯಪೂರ್ವ ಅವಕಾಶ. ಮಹಾನಡವಲಿಗಷ್ಟೇ ಬೆಟ್ಟ ವಿಳಿದು ನೆಲ್ಯಾಡಿ ಬೀಡಿನಲ್ಲಿ ಪ್ರತ್ಯಕ್ಷನಾಗುವ ಅಣ್ಣಪ್ಪ ಸ್ವಾಮಿಗೆ ಭಕ್ತರಿಂದ ಇನ್ನಿಲ್ಲದ ಗೌರವ.ಮಾಹಿತಿ : ಅನೂಪ್ ಕುಮಾರ್ ಶೆಟ್ಟಿ| Courtesy : © Beauty of TulunadDharma

About Pavanesh D

Pavanesh D

Leave a Reply