Don't Miss
Home / All / Bhandra Kanapuna Padhathi
Bhandara

Bhandra Kanapuna Padhathi

ಇದು ದೈವ ವೈದ್ಯನಾಥನ ಚಪ್ಪರ ಸೇವೆ ನಡೆಯುವಲ್ಲಿಂದ ಭಂಡಾರಮನೆಗೆ ಸುಮಾರು ಏಳೆಂಟು ಕಿ.ಮೀ. ದೂರಕ್ಕೆ ಭಂಡಾರವನ್ನು ಕೊಂಡೊಯ್ಯುವ ದೃಶ್ಯ..ಇದರ ಹಿಂದೆ ಬಾಲ್ಯದ ಹಲವು ನೆನಪುಗಳಿವೆ. ಮರಕಳ ಬೆಟ್ಟು ಎಂದು ಕರೆಯುವ ಈ ಪ್ರದೇಶಕ್ಕೆ ಜಾತ್ರೆಗೆ ಹೋಗೋವಾಗ ಸಣ್ಣ ತೊರೆಯ ದಂಡೆಯಲ್ಲಿಯೇ ನಡೆದುಕೊಂಡು ಹೋಗಬೇಕಿತ್ತು. ಜನವರಿ ತಿಂಗಳಾದ್ದರಿಂದ ತೊರೆಗೆ ಕಟ್ಟೆ ಕಟ್ಟಿ ತೊರೆಯ ತುಂಬಾ ನೀರು ನಿಲ್ಲುತ್ತಿತ್ತು.

 

ಈ ನೀರಿನಿಂದಾಗಿ ಚಳಿಯಲ್ಲಿ ನಡೆದುಕೊಂಡು ಹೋಗೊದೆಂದರೆ ಒಂದು ದೊಡ್ಡ ಸಾಹಸ ನಮಗೆ ಅವಾಗ. ಸಂಜೆ ಒಮ್ಮೆ ಜಾತ್ರೆಯ ಹತ್ತಿರ ಹೋಗಿ ಅಲ್ಲಿ ನನ್ನಪ್ಪನ ಜತೆ ದೈವದ ಪ್ರಸಾದವನ್ನು ಅರಳಿ ಮರದ ಎಲೆಗೆ ಹಚ್ಚುವ ಕೆಲಸ ಮಾಡಿ ಬರುವಾಗ ಸುಕುನಪ್ಪ. ನಿಮ್ಮ ಮಂಡಕ್ಕಿ ನಮ್ಮ ಕುರ್ಲರಿ ತಗೊಂಡು ಬಂದು ಮತ್ತೆ ರಾತ್ರಿ ನೇಮಕ್ಕೆ ಹೋಗುತ್ತಿದ್ದೆವು. ಹೋಗೋವಾಗ ಅಜ್ಜಿಯ ಜಾಗ್ರತೆಯ ನುಡಿಗಳು, ಅಲ್ಲಿ ನೀರಿರುವ ಪ್ರದೇಶ ಮಗೂ ಅಪ್ಪನ ಜತೆಗೇ ಇರು ಎಲ್ಲಿಗೂ ಹೋಗಬೇಡ ಅದೂ ಇದೂ ಎಂದು. ಅದನ್ನೆಲ್ಲ ಕೇಳಿಕೊಂಡು ಜಾತ್ರೆಗೆ ಹೋದ ನಾವು ಅಲ್ಲಿನ ಚಳಿ ವಾತಾವರಣದಲ್ಲಿ ನೇಮ ನೋಡುತ್ತಿದ್ದೆವು. ನಂತರ ಬೆಳಿಗ್ದಿನ ಜಾವ ಮತ್ತೆ ಮನೆಗೆ ವಾಪಸ್. ಎರಡು ದಿನದ ಜಾತ್ರೆಯಾದ ಕಾರಣ ಮೊದಲಿನ ದಿನ ವೈದ್ಯನಾಥನ ನೇಮ ಮರುದಿನ ಜುಮಾದಿ ಬಂಟ ದೈವಗಳ ನೇಮವಿರುತ್ತದೆ. ಜುಮಾದಿ ಬಂಟ ದೈವಗಳ ನೇಮ ರಾತ್ರಿ ಬೇಗನೆ ಮುಗಿಯುತ್ತಿತ್ತು.

ಅದಾದ ನಂತರ ನಮ್ಮ ಮನೆಯವರಾರಾದರೂ ಬಂದಿದ್ದರೆ ಅವರೊಂದಿಗೆ ವಾಪಾಸ್ ಬರುತ್ತಿದ್ದೆ. ಇಲ್ಲದೇ ಇದ್ದರೆ ಭಂಡಾರದ ಪಲ್ಲಕ್ಕಿ ಹೊರುವ ಅಪ್ಪನೊಂದಿಗೆ ಮರುದಿನ ಬೆಳಿಗ್ಗೆ ಭಂಡಾರದೊಂದಿಗೆ ಮನೆ ಕಡೆ ಹೆಜ್ಜೆ. ಒಂದು ವೇಳೆ ಬೇಗನೇ ಬಂದಿದ್ದರೆ ಸುಮಾರು ಏಳು ಗಂಟೆಯ ಸಮಯದಲ್ಲಿ ಬರುವ ಭಂಡಾರವನ್ನು ನೋಡಲು ನಾನು ಮತ್ತು ಅಜ್ಜಿ ಗದ್ದೆಯ ಬಳಿಗೆ ಹೋಗುತ್ತಿದ್ದೆವು. ಅಲ್ಲಿ ಭಂಡಾರವನ್ನು ಕಂಡು ಕೈಮುಗಿದು ಬರುವುದು ನಮ್ಮ ರೂಢಿಯಾಗಿತ್ತು, ಇವಾಗ ದಾರಿಯುದ್ದಕ್ಕೂ ತೊರೆಯಿದೆ. ಆದರೆ ನೀರಿರುವುದು ಖಚಿತವಲ್ಲ. ಕಟ್ಟೆ ಕಟ್ಟೋದು ಅಪರೂಪದ ಮಾತು, ಭಂಡಾರ ತೆರಳುವಾಗ ಅಲ್ಲಿನ ಚಾಕರಿಯವರು ಬಿಟ್ಟರೆ ಉಳಿದವರಿಗೆ ಪುರುಸೊತ್ತೇ ಇರೋದಿಲ್ಲ.

Credits : Rakesh Konaje

About Pavanesh D

Pavanesh D

Leave a Reply