Home / All / Belli Kalungura

Belli Kalungura

ಮುತ್ತೈದೆತನದ ಸಂಕೇತವಾಗಿ ಬೆಳ್ಳಿ ಕಾಲುಂಗುರ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ….

ಎಷ್ಟೊಂದು ಅರ್ಥಪೂರ್ಣವಾದ ಸಾಲುಗಳು ಹೆಣ್ಣಿನ ಮುತ್ತೈದೆತನಕ್ಕೆ ಬೆಳ್ಳಿ ಕಾಲುಂಗುರ ಒಂದು ಉದಾಹರಣೆ ಎನ್ನಬಹುದು. ಎರಡು ಕಾಲಲ್ಲಿ ಕಾಲುಂಗುರಗಳು ಹೆಣ್ಣಿನ ಮುತ್ತೈದೆತನದ ಸಂಕೇತವಾಗಿ ಪ್ರಚಲಿತದಲ್ಲಿದೆ. ಎರಡು ಪಾದಗಳ ಎರಡನೆ ಬೆರಳುಗೆ ಕಾಲುಂಗುರವನ್ನು ತೋಡಿಸುವ ಪದ್ದತಿ ಹಿಂದಿನಿಂದಲೂ ಪ್ರಚಲಿತದಲ್ಲಿದ್ದು, ಕಾಲುಂಗುರವನ್ನು ಯಾರು ಬೇಕೆನ್ನುವರು ಹಾಕುವಂತಿಲ್ಲ ಮದುವೆಯಾದ ಮುತ್ತೈದೆಯರು ಮಾತ್ರ ಈ ಕಾಲುಂಗುರವನ್ನು ಹಾಕುವ ಅಧಿಕಾರವಿದೆ ಅನ್ನೋ ಮಾತಿದೆ.

ಮುತ್ತೈದೆತನಕ್ಕೆ ಸಾಕ್ಷಿ:
ಕಾಲುಂಗುರದ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲ ಕೊರಳಿನಲ್ಲಿ ಮಾಂಗಲ್ಯ ಸೂತ್ರ, ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ, ಕಾಲಲ್ಲಿ ಕಾಲುಂಗುರ ಇವುಗಳು ಹೆಣ್ಣಿನ ಮುತ್ತೈದೆತನಕ್ಕೆ ಸಾಕ್ಷಿಯಾಗಿದ್ದು, ಕಾಲುಂಗುರವನ್ನು ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಕಾಲಿನ ಬೆರಳಿಗೆ ಹಾಕಲಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಮದುವೆಯ ಬೆಳಗ್ಗಿನ ಜಾವ ಮನೆಯಿಂದ ಹೊರಡುವ ಮುನ್ನ ಹೆಣ್ಣಿನ ಕಾಲು ಬೆರಳಿಗೆ ಕಾಲುಂಗುರವನ್ನು ತುಳಸಿ ಕಟ್ಟೆಯ ಎದುರಿನಲ್ಲಿ ತೋಡಿಸಲಾಗುತ್ತಿದ್ದು ಇಂದಿಗೂ ಕೂಡ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ಮದುವೆ ಪರಿಪೂರ್ಣವಾಗಬೇಕಾದರೆ ಕಾಲುಂಗುರ ಮುಖ್ಯವಾಗಿರುತ್ತದೆ. ಇನ್ನು ಮದುವೆಯ ಸಂದರ್ಭದಲ್ಲಿ ಮದುಮಗನ ಕಾಲಿನಲ್ಲೂ ಕೂಡ ಈ ಕಾಲುಂಗುರವನ್ನು ಕಾಣಬಹುದು. ಇದು ಅವರವರ ಸಂಪ್ರದಾಯ, ಜಾತಿ, ಆಚರಣೆಗೆ ಬಿಟ್ಟ ವಿಷಯ. ಇನ್ನು ಕೆಲವು ಕಡೆಗಳಲ್ಲಿ ಮದುವೆಯ ಸಂದರ್ಭದಲ್ಲಿ ಮದುಮಗನು ಮದುಮಗಳ ಕಾಲಿನ ಬೆರಳಿಗೆ ಕಾಲುಂಗುರವನ್ನು ತೋಡಿಸುವ ಮೂಲಕ ಸಪ್ತಪದಿ ತುಳಿಯುತ್ತಾರೆ.

ಫ್ಯಾಶನ್ ರೂಪದಲ್ಲಿ ಕಾಲುಂಗುರ:
ಭಾರತದ ಕೆಲವೊಂದು ಕಡೆಗಳಲ್ಲಿ ಮದುವೆಯಾದ ನಂತರ ಮುತ್ತೈದೆಯು ಯಾವುದೇ ಕಾರಣಕ್ಕೂ ಕಾಲುಂಗುರವನ್ನು ಬೆರಳಿನಿಂದ ತೆಗೆಯಬಾರದು ಅನ್ನೋ ಶಾಸ್ತ್ರವಿದೆ. ಹಿಂದೆಲ್ಲ ಕಾಲುಂಗುರವಿಲ್ಲದೆ ಮದುವೆಯಾದ ಮುತ್ತೈದೆಯು ಮನೆಯ ಹೊಸ್ತಿಲನ್ನು ದಾಟಬಾರದೆಂಬುದಿತ್ತು, ಆದರೆ ಇಂದು ಕಾಲ ಬದಲಾಗಿದೆ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದು, ಕಾಲುಂಗುರಗಳನ್ನು ಕಾಲಿನ ಬೆರಳಿಗಲ್ಲದೆ ಹಣೆಗಳಿಗೆ, ಹೊಕ್ಕಳಿಗೆ ಫ್ಯಾಶನ್ ರೂಪದಲ್ಲಿ ಸಿಕ್ಕಿಸುವ ಮೂಲಕ ಇದರ ಮೌಲ್ಯಗಳನ್ನು ಕಡಿಮೆಮಾಡುತ್ತಿದ್ದಾರೆ.

ಮದುವೆಯಾದ ಮಹಿಳೆಯರಂತೂ ಕಾಲುಂಗುರವನ್ನು ಹಾಕುವುದು ತಮ್ಮ ಪ್ಯಾಶನ್ ಗೆ ಅಡ್ದಿ ಬರುತ್ತದೆ ಅನ್ನೋ ನಿಟ್ಟಿನಲ್ಲಿ ಇದನ್ನು ತೋಡುವುದನ್ನೆ ಕಡಿಮೆಮಾಡುತ್ತಿದ್ದಾರೆ ಮಹಿಳೆಯರು ಎಲ್ಲಾ ವಸ್ತುಗಳನ್ನು ಪ್ಯಾಶನ್ ರೀತಿಯಲ್ಲಿ ಬಳಸುತ್ತಿರುವ ಕಾಲ ಇದಾಗಿದ್ದು ಕಾಲುಂಗುರಗಳು ಕೂಡ ಇಂದಿನ ಯುವತಿಯರಿಗೆ ಪ್ಯಾಶನ್ ಆಗಿದೆ.
ಮುತ್ತೈದೆಯರು ಕಾಲುಂಗುರವನ್ನು ಕಾಲಿಗೆ ಹಾಕದ ಮುಖಾಂತರ ಮದುವೆಯಾಗದ ಯುವತಿಯರು ಕಾಲುಂಗುರವನ್ನು ಹಾಕಿಕೊಳ್ಳುವ ಮುಖಾಂತರ ಕಾಲುಂಗುರಗಳಿಗಿರುವ ಮೌಲ್ಯವನ್ನೇ ಕಡಿಮೆ ಮಾಡುತ್ತಿದ್ದಾರೆ. ಇದರಿಂದ ಯಾರು ಮದುವೆಯಾದವರು ಯಾರು ಅಲ್ಲ ಅನ್ನೋದೆ ತಿಳಿಯದ ಮಟ್ಟಿಗೆ ಹಿಂದೂ ಸಂಪ್ರದಾಯ ಬಂದು ನಿಂತಿದೆ .
ಕೃಪೆ : ವಜ್ರ ಗುಜರನ್, ಮಾಡೂರು | Published : SSMedia

About Pavanesh D

Pavanesh D

Leave a Reply