Home / Temples / Bapanadu Durga Parameswari

Bapanadu Durga Parameswari

ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ

ಇತಿಹಾಸ :

ಬಪ್ಪಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯೊಬ್ಬ ಶಾಂಭವಿ ನದಿಯಲ್ಲಿ ದೋಣಿಯಲ್ಲಿ ಬರುತ್ತಿದ್ದಾಗ ದೋಣಿ ಇದ್ದಕ್ಕಿದ್ದಂತೆ ನಿಲ್ಲುತ್ತದೆ. ನದಿ ತುಂಬಾ ರಕ್ತ ನೋಡಿದ ಬಪ್ಪಬ್ಯಾರಿ ಭಯಗೊಂಡಾಗ ದೇವಿಯ ವಾಣಿ ಕೇಳಿಸುತ್ತದೆ. ನೀನು ನನಗೊಂದು ಗುಡಿ ಕಟ್ಟಿಸಿಕೊಡು, ಜೈನ ಸಾವಂತನ ಬಳಿ ಹೋಗಿ ಸಹಾಯ ಕೇಳು ಹಾಗೂ ಬಾಳಿಯ ಉಡುಪನನ್ನು ನನ್ನ ಗುಡಿಯ ಅರ್ಚಕನನ್ನಾಗಿ ನೇಮಿಸು ಎಂದು ಹೇಳುತ್ತಾಳೆ. ಅದರಂತೆ ನಡೆದ ವಿಷಯವನ್ನು ಸಾವಂತನ ಬಳಿ ಬಪ್ಪಬ್ಯಾರಿ ತೋಡಿಕೊಂಡಾಗ ದೇವಿಗೆ ಗುಡಿ ನಿರ್ಮಾಣವಾಗುತ್ತದೆ. ಅಂದಿನಿಂದ ಕ್ಷೇತ್ರವನ್ನು ಬಪ್ಪನಾಡು ಎಂದು ಕರೆಯಲಾಗುತ್ತದೆ ಎನ್ನುವುದು ಕ್ಷೇತ್ರದ ಇತಿಹಾಸ. ಮುಸ್ಲಿಂರೂ ಉತ್ಸವದಲ್ಲಿ ಭಾಗಿ : ಈ ಭಾಗದ ಶಕ್ತಿ ದೇವಾಲಯಗಳಲ್ಲೊಂದಾದ ಈ ದೇವಾಲಯ ಲಿಂಗರೂಪಿಣಿ ದುರ್ಗೆ, ಮುಸ್ಲಿಮರಿಗೂ ಕ್ಷೇತ್ರದಲ್ಲಿ ಪ್ರಸಾದ ವಿತರಣೆ ನಡೆಯುತ್ತದೆ. ಬ್ರಹ್ಮರಥೋತ್ಸವದಲ್ಲಿ ಮುಸ್ಲಿಮರೂ ಭಾಗವಹಿಸುತ್ತಾರೆ ಅಲ್ಲದೆ ಪೂಜಾನಂತರ ಮೊದಲ ಪ್ರಸಾದ ಬಪ್ಪಬ್ಯಾರಿ ಕುಟುಂಬದವರಿಗೆ ನೀಡಲಾಗುತ್ತದೆ.

ಕ್ಷೇತ್ರದ ವಿಳಾಸ :
ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ
ರಾ.ಹೆ. 17 , ಮೂಲ್ಕಿ ದಕ್ಷಿಣ ಕನ್ನಡ – 574154
ದೂ : 0824 – 290585 [ದೇಗುಲ ದರ್ಶನ]

By : Beauty of Tulunad

About Pavanesh D

Pavanesh D

Leave a Reply