Home / All / 90 YEARS HARD WORKING PAVANJE RUKMAYA MOOLYA.

90 YEARS HARD WORKING PAVANJE RUKMAYA MOOLYA.

ದಣಿವರಿಯದ ತುಳುನಾಡಿನ ಮಣ್ಣಿನ ಮಗ”.. ಶ್ರೇಷ್ಠ ಕೃಷಿಕ ಶ್ರೀ ರುಕ್ಮಯ ಮೂಲ್ಯ ಪಾವಂಜೆ ”

ದಿ। ಬೊಗ್ಗು ಮೂಲ್ಯ ಮತ್ತು ದಿ। ದುಗ್ಗಮ್ಮ ಮೂಲ್ಯ ರವರ ಪುತ್ರನಾಗಿ ಪಾವಂಜೆ ಗ್ರಾಮದಲ್ಲಿ ಜನಿಸಿದರು. ಕಡುಬಡತನವಿದ್ದುದರಿಂದ ಶಾಲೆಯ ಮೆಟ್ಟಿಲುನ್ನು ತಾವು ಏರದೆ, ಕೃಷಿಯನ್ನೇ ತನ್ನ ಸರ್ವಸ್ವ ಎಂದು ತಿಳಿದು ಕಾರ್ಯ ಪ್ರವತರಾಗಿದ್ದರು. ಸುಮಾರು 90 ವರ್ಷ ಪ್ರಾಯದವರಾದ ರುಕ್ಮಯ ಮೂಲ್ಯ ಯುವಕರಿಗೆ ಆದರ್ಶರಾಗಿದ್ದಾರೆ.

ಸುಮಾರು ೧೫ ಎಕ್ರೆ ಕೃಷಿ ಭೂಮಿಯಲ್ಲಿ ಏನೆಲ್ – ಸುಗ್ಗಿ – ಕೊಳಕೆ – ಇಡೆ ಕೊಳಕೆ ಕೃಷಿ ಮಾಡಿ, ತಾಲೂಕಿನಲ್ಲಿಯೇ ಹೆಚ್ಚು ಇಳುವರಿ ತೆಗೆದ ಕೀರ್ತಿ ರುಕ್ಕಯ್ಯ ಮೂಲ್ಯ ರವರದ್ದು. ಸಾವಯವ ಗೊಬ್ಬರ ಬಳಸಿ ಕರಾವಳಿ ಭಾಗದಲ್ಲಿ ಬೆಳೆಯುವ ಸರ್ವ ರೀತಿಯ ತರಕಾರಿಯನ್ನು ಬೆಳೆಸಿದ್ದಾರೆ. ಹೆಸರು, ಉದ್ದು, ಎಳ್ಳು, ಬೆಳೆಯನ್ನು, ಬೆಳೆಸುವಲ್ಲಿ ತಾವು ನಿಸ್ಸಿಮರು ಎಂದು ತಾವು ತೋರ್ಪಡಿಸಿದ್ದಾರೆ. ಈ ಇಳಿವಯಸ್ಸಿನಲ್ಲಿಯು ರುಕ್ಮಯ ಮೂಲ್ಯ ರವರು ಕೋಣಗಳ ಸಹಾಯದಿಂದ ಕೃಷಿಯನ್ನು ಮಾಡುತ್ತಿರುವುದು ನವಯುವಕರಿಗೆ ಮಾರ್ಗದರ್ಶಕರಾಗಿರುತ್ತೀರಿ.

ಪ್ರತಿ ವರ್ಷ ಹೆಸರಾಂತ ದಿನಪತ್ರಿಕೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾದಾಗ, ರುಕ್ಮಯ ಮೂಲ್ಯ ರವರ ಭಾವ ಚಿತ್ರದೊಂದಿಗೆ ಕೃಷಿ ಬಗ್ಗೆ ಲೇಖನವನ್ನು ಬರೆಯುತ್ತಾರೆ. ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವವರು ರುಕ್ಕಯ್ಯ ಮೂಲ್ಯರ ಕೃಷಿ ಚಟುವಟಿಕೆಯನ್ನು ನೋಡದವರೇ ಇರಲಿಕ್ಕೆ ಇಲ್ಲ. ಮನೆಯಲ್ಲಿ ಭತ್ತವನ್ನು ಅಕ್ಕಿ ಮಾಡಿ ಅನುಭವಿರುವ ರುಕ್ಕಯ್ಯ ಮೂಲ್ಯ , ಯಾವ ಋತು ಮಾನದಲ್ಲಿ ಯಾವ ಬೆಲೆ ಸೂಕ್ತವಾದದ್ದು ಎಂದು ಹೇಳುವುದರಲ್ಲಿ ಮೂಲ್ಯರು ನಿಸ್ಸಿಮರು. ಬಪ್ಪನಾಡು ದೇವಸ್ಥಾನದಲ್ಲಿ ತುಳು ಸಮ್ಮೇಳನದಲ್ಲಿ ಉತ್ತಮ ಕೃಷಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಾವಂಜೆಯ ಸುತ್ತ ಮುತ್ತ ಇರುವ ಎಲ್ಲ ಸಂಘ ಸಂಸ್ಥೆಗಳು ರುಕ್ಕಯ್ಯ ಮೂಲ್ಯರಿಗೆ ಸನ್ಮಾನವನ್ನು ಮಾಡಿ ಗೌರವಿಸಿರುತ್ತಾರೆ. ಈ ಇಳಿವಯಸ್ಸಿನಲ್ಲಿ 3 ಎಕ್ರೆ ಜಾಗೆಯಲ್ಲಿ ಸ್ವತಃ ಉಳುಮೆ ಮಾಡಿ ನಾಟಿ ಮಾಡಿದ್ದು ರುಕ್ಮಯ ಮೂಲ್ಯರಿಗೆ ಕೃಷಿಯ ಬಗ್ಗೆ ಇರುವ ಅಪಾರ ಕಾಳಜಿಯನ್ನು ಸಾರಿ ಹೇಳುತ್ತಿದೆ. Courtesy : © Beauty of Tulunad (All Rights Resevred) | Credits : Anoop Soorinje ©

About Pavanesh D

Pavanesh D

Leave a Reply