Home / All / ಹೊಸ ವರ್ಷಕ್ಕಾಗಿ ಸುಲಭವಾದ ಬ್ಯೂಟಿ ರೆಸೊಲ್ಯೂಷನ್ಸ್

ಹೊಸ ವರ್ಷಕ್ಕಾಗಿ ಸುಲಭವಾದ ಬ್ಯೂಟಿ ರೆಸೊಲ್ಯೂಷನ್ಸ್

ಹೊಸ ರೆಸೊಲ್ಯೂಷನ್ಸ್ ಮಾಡಿಕೊಳ್ಳುವ ಸಮಯ ಬಂದಿದೆ. ೨೦೧೯ ಮನೆ ಮನಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೆಲವು ರೆಸೊಲ್ಯೂಷನ್ಸ್ ಮಾಡಿಕೊಂಡಿರುತ್ತೇವೆ ಅಲ್ಲವೇ? ಮಾಡಲಿಕ್ಕೇನೋ ಮಾಡಿರುತ್ತೇವೆ, ಆದರೆ ವರ್ಷವಿಡೀ ಮುಂದುವರೆಸಿಕೊಂಡು ಹೋಗುವುದರಲ್ಲಿಯೇ ಇದೆ ನಿಜವಾದ ವಿಷಯ. ಸಧ್ಯ, ಈ ವರ್ಷದಲ್ಲಾದರೂ ಯಾವುದೇ ರೆಸೊಲ್ಯೂಷನ್ಸ್ ಬ್ರೇಕ್ ಮಾಡುವುದಿಲ್ಲ ಎನ್ನುವುದೇ ನಮ್ಮ ಮೊದಲನೆಯ ರೆಸೊಲ್ಯೂಷನ್ ಆಗಲಿ.

ವಿಷಯಕ್ಕೆ ಬರೋಣ. ಮಹಿಳೆಯರೇ ಈ ವರ್ಷ ನಾವು ಇನ್ನು ಸ್ವಲ್ಪ ಬ್ಯೂಟಿಫುಲ್ ಆಗೋಣವೇ? ತುಂಬಾ ಸುಲಭ. ಬ್ರೇಕ್ ಮಾಡೋಕೆ ಮನಸ್ಸು ಬರೋಲ್ಲ ನೋಡಿ!

ರೆಸೊಲ್ಯೂಷನ್ 1 :

ಸಾಕಷ್ಟು ನೀರು ಕುಡಿಯಿರಿ:

ತುಂಬಾ ಸುಲಭ ಅಲ್ವಾ? ಅದೂ ಅಲ್ಲದೆ ಸೌಂದರ್ಯಕ್ಕೆ ಸಂಬಂಧಪಟ್ಟಂತೆ ಇದರಿಂದಾಗುವ ಲಾಭ ಅಪಾರ. ನಮ್ಮ ಚರ್ಮದೊಳಗೆ ಅಡಗಿ ಕುಳಿತಿರುವ ನಂಜು, ಕೊಳೆಇತ್ಯಾದಿಗಳನ್ನು ಕಿತ್ತೆಸೆಯಲು ಉತ್ತಮ ಮಾರ್ಗ. ಇದು ನಿಮ್ಮ ಚರ್ಮಕ್ಕೆ ಹೊಳಪು ಕೊಡುವುದಲ್ಲದೇ, ನಿಮ್ಮ ದೇಹದ ಆರೋಗ್ಯವನ್ನೂ ಕಾಪಾಡುತ್ತದೆ.

ರೆಸೊಲ್ಯೂಷನ್ 2:

ತ್ವಚೆಯ ತೇವಾಂಶ ಕಾಯ್ದಿರಿಸುವುದು(Skin Moisturization):

ಚರ್ಮ ತೇವವಿಲ್ಲದೆ ಶುಷ್ಕವಾಗಿ ತುರಿಕೆ ಉಂಟುಮಾಡಿದರೆ ಯಾರಿಗೆ ಇಷ್ಟವಾಗುತ್ತದೆ? ಅದೂ ಅಲ್ಲದೆ ಚಳಿಗಾಲ ಬೇರೆ. ನಿಮ್ಮ ಚರ್ಮವನ್ನು ತೇವವಾಗಿ, ತಂಪಾಗಿ ಆರೋಗ್ಯಕರವಾಗಿ ಇರಿಸಬೇಕಾದರೆ Moisturization ಅಗತ್ಯ ಖಂಡಿತ ಇದೆ. ಮತ್ತು ಇದನ್ನು ನಿಯಮಿತವಾಗಿ ದಿನವೂ ಮಾಡುತ್ತಿರಬೇಕು. ಇದರಿಂದ ನಿಮ್ಮ ಚರ್ಮ ಕೋಮಲವಾಗಿ, ಮೃದುವಾಗಿ ಇರುವುದಲ್ಲದೆ, ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ.

ರೆಸೊಲ್ಯೂಷನ್ 3:

ಬ್ಯೂಟಿ ಟೈಮ್:

ಇತ್ತೀಚಿನ ದಿನಗಳಲ್ಲಿ ನಾವು ಬಿಝಿಯಾಗಿ ಸಮಯದ ಹಿಂದೆ ಓಡುತ್ತಿರುತ್ತೇವೆ. ಮೇಕ್ ಅಪ್ ಎನ್ನುವುದನ್ನು ಪ್ರಯಾಣ ಮಾಡುವಾಗಲೇ ಹೆಚ್ಚಾಗಿ ಮಾಡಿಕೊಳ್ಳುವಂತಾಗುತ್ತದೆ. ಆದರೆ, ಲೇಡೀಸ್!! ಈ ವರ್ಷ ಬ್ಯೂಟಿ ರೂಟೀನ್ ಗಾಗೀನೇ ಸ್ವಲ್ಪ ಸಮಯವನ್ನು ಮೀಸಲಿಡೋಣ.

ರೆಸೊಲ್ಯೂಷನ್ 4:

ಚೆನ್ನಾಗಿ ನಿದ್ರಿಸಿ:

ನೀವು ನಿದ್ರಿಸುವ ಸಮಯ, ಪ್ರಮಾಣ ಹಾಗು ಗುಣಮಟ್ಟ ನಿಮ್ಮ ಚರ್ಮಕ್ಕೆ ನೇರವಾದ ಪರಿಣಾಮ ಬೀರುತ್ತದೆ. ರಾತ್ರಿ ನಿದ್ದೆಯ ಸಮಯದಲ್ಲಿ ನಮ್ಮ ಚರ್ಮದ ಸೆಲ್ ಗಳ ಮರುಹುಟ್ಟು ನಡೆಯುತ್ತದೆ. ನಿಮ್ಮ ಸ್ಕಿನ್ ಕೇರ್ ರೂಟೀನ್ ಚೆನ್ನಾಗಿ ಆಗಿದ್ದರೆ, ಸರಿಯಾದ ನಿದ್ರೆ ನಿಮ್ಮ ಚರ್ಮವನ್ನು ಯಾವಾಗಲೂ ಮೃದುವಾಗಿ, ಕೋಮಲವಾಗಿ ಇರಿಸಿ, ಉತ್ತಮ ಪೋಷಣೆ ನೀಡುತ್ತದೆ. ಅದೂ ಅಲ್ಲದೆ, ಉತ್ತಮ ನಿದ್ರೆ, ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ರೆಸೊಲ್ಯೂಷನ್ 5:

ಯೋಗಾಸನ:

ಯೋಗಾಸನವು ನಮ್ಮ ದೇಹ ಹಾಗು ಮನಸ್ಸಿನ ಆರೋಗ್ಯವನ್ನು ಕಾಪಾಡುವುದಲ್ಲದೆ, ನಮ್ಮ ಚರ್ಮದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಯೋಗದ ಕೆಲವೊಂದು ಆಸನಗಳು, ನಮ್ಮ ಚರ್ಮಕ್ಕೆ ಹೊಳಪು ನೀಡುತ್ತವೆ. ಯೋಗದಿಂದಾಗಿ ದೇಹದ ರಕ್ತ ಪರಿಚಲನೆ ಸರಾಗವಾಗಿ ನಡೆದು ಚರ್ಮದ ತ್ವಚೆಯನ್ನು ವೃದ್ಧಿಸುತ್ತದೆ.

About Archana Devadiga

Archana Devadiga

Leave a Reply