Home / All / ಕಾರಣ

ಕಾರಣ

ನಿನ್ನ ಹೆಸರಿನ ಅನುವಾದ ಮಾಡಲೇ?
ಮುಂಜಾನೆಯ ಮೊದಲ ನೆನಪು ನೀನು
ಅದರ ಮರುಕ್ಷಣದ ನೆನಪೂ ನೀನು
ಮತ್ತದರ ಮರುಕ್ಷಣದ ನೆನಪೂ ಕೂಡ!!
ನೀರಸ ಮಧ್ಯಾಹ್ನದಲ್ಲೂ ನಿನ್ನ ಹಂಬಲ
ಕೆಲಸದ ನಡುವೆಯೂ ನಿನ್ನ ಹಗಲುಗನಸು
ನಿನ್ನಿಂದ ಕ್ಷಣ ಕ್ಷಣ ಬಣ್ಣ ಬಣ್ಣ
ಸಂಜೆಯ ಹೊಂಬಣ್ಣದಲ್ಲಿ ನಿನ್ನ ನೋಡುವಾಸೆ
ನಿನ್ನ ಆ ತುಂಟನಗು ಕಾಣುವಾಸೆ
ಆ ಅಮಲಿನಲೇ ಮೈಮರೆಯುವಾಸೆ
ಆಸೆಯೋ… ದುರಾಸೆಯೋ… ಕಾರಣ ಮಾತ್ರ ನೀನೆ!!

 

ಅರ್ಚನಾ

About Archana Devadiga

Archana Devadiga

Leave a Reply